ಶಿಗ್ಗಾವಿ :
ಬೇಸಿಗೆ ಸಮೀಪಿಸುತ್ತಿದ್ದು ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಮುಂಜಾಗೃತವಾಗಿ ಬಂಕಾಪೂರ ಪಟ್ಟಣದ ಎಲ್ಲ ವಾರ್ಡುಗಳಲ್ಲಿರುವ ಬೋರ್‍ವೆಲ್ ಗಳ ದುರಸ್ತಿಗೆ ಈಗಿನಿಂದಲೇ ಕ್ರಮ ಕೈಗೊಳ್ಳಬೆಕೇಂದು ಪುರಸಭೆ ಸದಸ್ಯರು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ತಾಲೂಕಿನ ಬಂಕಾಪೂರ ಪಟ್ಟಣದ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ತಿಳಿಸಿದ ಸರ್ವಸದಸ್ಯರು ಮೂಲ ಭೂತವಾಗಿ ಜನತೆಗೆ ಬೇಕಾದ ಸೌಲಭ್ಯ ನೀಡಲು ಕ್ರಮ ತೆಗೆದುಕೊಳ್ಳಲು ನಿರ್ದೇಶನ ನೀಡಿದರು.
ನಂತರ ಉತ್ತರಿಸಿದ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಹಂತ, ಹಂತವಾಗಿ ಬೋರ್‍ವೆಲ್ ಗಳ ದುರಸ್ತಿ ಕಾರ್ಯ ಮುಂದುವರೆದಿದೆ. ಅವುಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಹೆಸ್ಕಾಂ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಯಾವುದೇ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೋಳ್ಳುವ ಬರವಸೆ ನೀಡಿದರು.
ಪಟ್ಟಣದಲ್ಲಿ ಸುಮಾರು 10 ರಿಂದ 12 ಮೋಬೈಲ್ ಟಾವರ್‍ಗಳಿದ್ದು ಅವುಗಳಿಗೆ ಪುರಸಭೆ ಕರ ನಿಗದಿಮಾಡುವಂತೆ ಬುಧವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಹೊನ್ನಪ್ಪ ಹೂಗಾರ ಒತ್ತಾಯಿಸಿದರು.
ಸರಕಾರದ ಆದೇಶದನ್ವಯ ಮೋಬೈಲ್ ಟಾವರ್‍ಗಳಿಗೆ ಕರ ನಿಗದಿ ಮಾಡಲು ಒತ್ತಾಯಿಸಿದಾಗ ಸರ್ವ ಸದಸ್ಯರು ಅದಕ್ಕೆ ಸಹಮತ ವ್ಯಕ್ತಪಡೆಸಿದರು. ಮಾಜಿ ಲೋಕಸಭಾ ಸದಸ್ಯ ದಿ. ಬಿ.ಎಂ.ಮೇಣಸಿನಕಾಯಿ ಅನುದಾನದಲ್ಲಿ ನಿರ್ಮಾಣಗೊಂಡ ಸಭಾ ಭವನವನ್ನು ಪುರಸಭೆ ವ್ಯಾಪ್ತಿಗೆ ಪಡೆದು ಪಟ್ಟಣದ ಹೆಮ್ಮೆಯ ಸುಪುತ್ರಿ ಬಂಕಾಪುರ ಶೋಧನ ಪುಸ್ತಕ ರಚಿಸಿದ ಶಾಹಿತಿ ಚನ್ನಕ್ಕ ಯಲಿಗಾರ ರವರ ಹೆಸರಿಡಲು ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಎಸ್.ಸಿ/ಎಸ್.ಟಿ ಹಾಗು ಅಂಗವಿಕಲರಿಗೆ 15 ಸಾವಿರ ಸಹಾಯಧನದಲ್ಲಿ 42 ಶೌಚಾಲಯಗಳನ್ನು ನಿರ್ಮಿಸಲು ಅವಕಾಶ ವಿದ್ದು ಈಗ ಕೇವಲ 10 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ. ಇನ್ನುಳದವುಗಳಿಗೆ ಅರ್ಜಿ ಕರೆಯಲು ಪುರಸಭೆ ಆರೋಗ್ಯಾಧಿಕಾರಿ ಗಡಾದ ಸಭೆಗೆ ಅನುಮತಿ ಕೇಳಿದಾಗ ಸದಸ್ಯ ಮುನ್ನಾ ಗುಲ್ಮಿ ಈ ಹಿಂದೆ ಶೌಚ್ಛಾಲಯ ನಿರ್ಮಿಸಿಕೊಂಡವರಿಗೇನೇ ಸಹಾಯ ಧನ ನೀಡಲು ಇದುವರೆಗೂ ಆಗಿಲ್ಲ ಅಂತಹದರಲ್ಲಿ ಮತ್ತೆ ಶೌಚ್ಛಾಲಯಕ್ಕೆ ಅರ್ಜಿ ಕರೆದು ಪಲಾನುಬವಿಗಳು ಸಹಾಯದನಕ್ಕಾಗಿ ಪುರಸಭೆಗೆ ಅಲೆಯುವಂತೆ ಮಾಡುವದು ಸರಿಯಲ್ಲ. ಮೊದಲು ಶೌಚ್ಛಾಲಯ ನಿರ್ಮಿಸಿಕೊಂಡವರಿಗೆ ಸಹಾಯದನವನ್ನು ನೀಡಿ ನಂತರ ಹೊಸ ಅರ್ಜಿಕರೆಯುವ ವಿಚಾರ ಮಾಡೊಣವೆಂದು ಆ ವಿಷಯಕ್ಕೆ ತೆರೆ ಎಳೆದರು.
ಸಾರ್ವಜನಿಕರಿಗೆ ಅನಕೂಲವಾಗಲೆಂದು ಹಳೆ ಕೊಂಡವಾಡ ಜಾಗೆಯಲ್ಲಿ ನಿರ್ಮಿಸಿದ ಶೌಚ್ಛಾಲಯ ನಿರ್ಮಾಣಗೊಂಡು ವರ್ಷ ಕಳೆದರೂ ಉದ್ಘಾಟನೆ ಬಾಗ್ಯ ಕಂಡಿರುವದಿಲ್ಲ. ಇದಕ್ಕೆ ಕಾರಣ ತಿಳಿಯದಂತಾಗಿದೆ ಕೂಡಲೆ ಶೌಚ್ಛಾಲಯವನ್ನು ಉದ್ಘಾಟನೆಗೊಳಿಸಿ ಸಾರ್ವಜನಿಕರ ಬಳಕೆಗೆ ಅನಕೂಲಮಾಡಿಕೊಡಿ ಇಲ್ಲದೇ ಹೋದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸದಸ್ಯ ಹೊನ್ನಪ್ಪ ಹೂಗಾರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಗ ಮುಖ್ಯಾಧಿಕಾರಿಗಳು ಮಾತಿನ ಮದ್ಯ ಪ್ರವೇಸಿಸಿ ಡಿಸೆಂಬರ 3 ಕ್ಕೆ ಶೌಚ್ಛಾಲಯವನ್ನು ಉದ್ಘಾಟಿಸಿ ಸಾರ್ವಜನಿಕರ ಅನಕುಲಕ್ಕಾಗಿ ನೀಡಲಾಗುವದೆಂದು ಬರವಸೆ ನೀಡಿದರು. ಅಂಬೇಡ್ಕರ ಸಭಾಭವನಕ್ಕೆ ಜಾಗೆ ಗುರುತಿಸಲಾಗಿದ್ದು ಅದನ್ನು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ವಿಷಯವಾಗಿ ಮುಖ್ಯಾಧಿಕಾರಿಗಳು ಪ್ರಸ್ತಾಪಿಸಿದಾಗ ಮಾಜಿ ಸ್ಥಾಯಿ ಸಮಿತಿ ಅದ್ಯಕ್ಷ ಶಾಂತವೀರಯ್ಯ ಗಚ್ಚಿನಮಠ ಅದಕ್ಕೆ ಒಪ್ಪಗೆ ಸೂಚಿಸಿದಾಗ ಅದಕ್ಕೆ ಸರ್ವ ಸದಸ್ಯರು ಸಹಮತ ವ್ಯಕ್ತಪಡೆಸಿದರು. ಪಟ್ಟಣದ 23 ವಾರ್ಡಗಳಲ್ಲಿ ಎಂ.ಎಚ್.ಬೀದಿ ದೀಪ ಅಳವಡಿಸಲು ಸಭೆ ತಿರ್ಮಾನಿಸಿತು.
ಖತೀಬ ಲೇಔಟ್ ಪ್ರಸ್ತುತ ಉತಾರ ಪೂರೈಕೆ ಸ್ಥಗಿತಗೊಳಿಸಿರುವದನ್ನು ಪ್ರಶ್ನಿಸಿದ ಸದಸ್ಯ ಮುನ್ನಾ ಗುಲ್ಮಿ. ಉಮೇಶ ಮಾಳಗಿಮನಿ ಪ್ರಶ್ನೆಗೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಪ್ಲಾಟಿನ 46 ಲಕ್ಷಕ್ಕಿಂತ ಅಧಿಕ ಅಭಿವೃದ್ದಿ ಹಣವನ್ನು ಮಾಲಕರು ಪುರಸಭೆಗೆ ಸಂದಾಯಮಾಡಬೇಕಾಗಿದ್ದು ಆ ನಿಟ್ಟಿನಲ್ಲಿ ಪ್ರಸ್ತುತ ಉತಾರ ಪೂರೈಕೆ ಮಾಡಲಾಗುತ್ತಿಲ್ಲ ಎಂಬ ಉತ್ತರಕ್ಕೆ ಮರು ಪ್ರಶ್ನೆ ಹಾಕಿದ ಸದಸ್ಯರು ಈ ಹಿಂದೆಯೇ ಆ ಹಣವನ್ನು ಬರಣಾಮಾಡಿಕೊಂಡು ಉತಾರ ಪೂರೈಕೆ ಮಾಡಬೇಕಾಗಿತ್ತು ಈ ಹಿಂದೆಯೇ ನೂರಕ್ಕೆ ನೂರರಷ್ಟು ಉತಾರ ಪೂರೈಕೆಮಾಡಿ ಈಗ ತಡೆಹಿಡಿದರೆ ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಯವರು ಆ ಘಟನೆ ನಾನು ಬರುವದಕ್ಕಿಂತ ಮುಂಚಿತವಾಗಿಯೇ ನಡೆದಿದೆ ಎಂದು ಜಾರಿಕೊಂಡರು. ಅದಕ್ಕೆ ಸದಸ್ಯರು ಪುರಸಭೆಯವರು ಮಾಡಿದ ತಪ್ಪಿಗೆ ಹಣ ನೀಡಿ ಖರೀದಿ ಮಾಡಿಕೊಂಡ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಅದ್ಯಕ್ಷೆ ಶಾಬಿರಾಬಿ ಯಲಗಚ್ಚ ಸಭೆಯ ಅದ್ಯಕ್ಷತೆ ವಹಿಸಿದ್ದರು.
ಉಪಾದ್ಯಕ್ಷೆ ವಿಧ್ಯಾ ಕೂಲಿ, ಸ್ಥಾಯಿ ಸಮಿತಿ ಅದ್ಯಕ್ಷ ಶಿದ್ಧಿಕ ಖತೀಬ, ಮಾಜಿ ಸ್ಥಾಯಿ ಸಮಿತಿ ಅದ್ಯಕ್ಷ ಇಸ್ಮಾಯಿಲ್‍ಸಾಬ ದೊಡ್ಡಮನಿ ಸೇರಿದಂತೆ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಬಿ.ಎಸ್.ಗಿಡ್ಡಣ್ಣವರ ನಿರೂಪಿಸಿದರು.