ಶಿರಾ:
ಕನಕದಾಸರು ದಾಸರಾದರೂ ಅವರೊಬ್ಬ ವೈಚಾರಿಕ ಚಿಂತಕರಾಗಿದ್ದರು. ಸಾಮಾಜಿಕ ವ್ಯವಸ್ಥೆಯ ವಿರುದ್ಧ ಅಕ್ರ ರೂಪದಲ್ಲಿ ಕ್ರಾಂತಿ ರೂಪಿಸಿ ಜಾತಿಯ ಮೃಲು ಕೀಳಿನ ಬಗ್ಗೆ ಸಿಡಿದೆದ್ದು ಸಾಹಿತ್ಯ ರಚಿಸಿದ್ದರು ಎಂದು ಜಾನಪದ ವಿದ್ವಾಂಸ ಹಾಗೂ ಪ್ರಾಧ್ಯಾಪಕ ಡಾ.ಚಿಕ್ಕಣ್ಣ ಯಣ್ಣೇಕಟ್ಟೆ ತಿಳಿಸಿದರು.
ನಗರದ ಸರ್ಕಾರಿ ಪ್ರ.ದ. ಕಾಲೇಜಿನಲ್ಲಿ ಶುಕ್ರವಾರ ಕೈಗೊಳ್ಳಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಬದುಕು ಬರಹ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.
ಕನಕದಾಸರ ಬದುಕು, ಮಾಡಲೀಕ ಪರಿಸರ, ಪಾಳೆಯ ಪಟ್ಟಿನ ಯುದ್ಧದ ಬಗ್ಗೆ ಲೆಕ್ಕ ಅಧೀಕ್ಷಕ ಲೋಕನಾಥ್ ತಿಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಮಾತನಾಡಿ ದಾಸ ಪರಂಪರೆಯಲ್ಲಿ ದಾಸರೊಳಗೊಬ್ಬ ಬಂಡಾಯಗಾರರಾಗಿದ್ದು ರಾಮಧಾನ್ಯ ಚರಿತ್ರೆಯ ಮೂಲಕ ಸಾಮಾಜಿಕ ವ್ಯವಸ್ಥೆಯನ್ನು ಅಣಕವಾಡಿದರು ಎಂದರು.ಕಾರ್ಯಕ್ರಮದಲ್ಲಿ ಬೋದಕ ವರ್ಗದವರಾದ ಶ್ಯಾಮ್‍ಸಾಬ್ ಮುಜಾವರ್, ಸತೀಶ್‍ಗೌಡ, ಬಂಡೀ ರಂಗನಾಥ್, ಶ್ರೀಮತಿ ಲತಾ, ಮುನಿರಾಜು, ಕಚೇರಿ ವ್ಯವಸ್ಥಾಪಕ ಡಿ.ಅಶ್ವಥ್, ನಾಗರಾಜು ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








