ನಕಲಿ ನೃತ್ಯ ಶಿಕ್ಷಕನ ಬಂಧನ

ಬೆಂಗಳೂರು

        ನೃತ್ಯ ಕಲಿಸಿಕೊಡುವುದಾಗಿ ಪರಿಚಯ ಮಾಡಿಕೊಂಡು ಯುವತಿಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ ಸಂಗೀತಾ ನಿರ್ದೇಶಕನನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

         ಜ್ಞಾನಭಾರತಿಯ ಮಂಜುನಾಥ್ ಕರಣ್ ಮಹದೇವ್ ಬಂಧಿತ ಆರೋಪಿ. ಕರಣ್ ಮಹದೇವ್ ಯುವತಿಯನ್ನು ಫೇಸ್‍ಬುಕ್‍ನಲ್ಲಿ ಪರಿಚಯ ಮಾಡಿಕೊಂಡು ಸಂಗೀತ ಹೇಳಿಕೊಡುವುದಾಗಿ ಹೇಳಿದ್ದ. ನಂತರ ಆ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ.

        ಕರಣ್ ಮಹದೇವ್ ಯುವತಿಯನ್ನು ಬೆದರಿಸಿ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಈ ನಡುವೆ ಯುವತಿಗೆ ಬೇರೆ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಈ ವಿಷಯವನ್ನು ತಿಳಿದ ಮಂಜುನಾಥ್ ಯುವತಿಯ ಜೊತೆಗಿನ ವಿಡಿಯೋ ತೋರಿಸಿ ಬೆದರಿಸಿದ್ದಾನೆ.

        ಈ ಸಂಬಂಧ ಯುವತಿ ಕರಣ್ ಮಹದೇವ್ ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಜ್ಞಾನಭಾರತಿ ಪೊಲೀಸರು ಆರೋಪಿ ಕರಣ್ ಮಹಾದೇವ್‍ನನ್ನು ಬಂಧಿಸಿದ್ದಾರೆ. ಕರಣ್ ಮಹದೇವ್ `ಗೂಳಿಹಟ್ಟಿ’ ಸಿನಿಮಾ ಸೇರಿದಂತೆ ಹಲವು ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾನೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link