ಆಗ್ರಾ:
ವಿಶ್ವವಿಖ್ಯಾತ ಪ್ರವಾಸಿ ತಾಣ ತಾಜ್ಮಹಲ್ನ ಮುಖ್ಯಸಮಾಧಿ ಸ್ಥಳವನ್ನು ವೀಕ್ಷಿಸಬೇಕಾದರೆ ಇನ್ನುಮುಂದೆ ಹೆಚ್ಚುವರಿ ಹಣ ಪಾವತಿಸಬೇಕು. ತಾಜ್ ಪ್ರವೇಶ ಶುಲ್ಕವನ್ನು ಉತ್ತರ ಪ್ರದೇಶ ಸರ್ಕಾರ 250ಕ್ಕೆ ಹೆಚ್ಚಿಸಿದೆ.
ನಿರೀಕ್ಷೆಯಂತೆಯೇ ಉತ್ತರ ಪ್ರದೇಶ ಸರ್ಕಾರ ವಿಶ್ವ ವಿಖ್ಯಾತ ತಾಜ್ ಮಹಲ್ ಪ್ರವೇಶ ದರವನ್ನು ಏರಿಕೆ ಮಾಡಿದ್ದು, ವಿದೇಶಿ ಪ್ರವಾಸಿಗರ ಪ್ರವೇಶ ಟಿಕೆಟ್ ದರದಲ್ಲೂ ಗಣನೀಯ ಏರಿಕೆ ಮಾಡಿದೆ.
50 ಶುಲ್ಕ ಪಾವತಿಸಿದವರಿಗೆ ಮುಖ್ಯ ಸಮಾಧಿಗೆ ಪ್ರವೇಶವಿಲ್ಲ. ತಾಜ್ನ ಹೊರ ಆವರಣದಲ್ಲಿ ಮಾತ್ರ ಓಡಾಡಬಹುದು. ಆಗ್ರಾದ ಪ್ರಾಚ್ಯವಸ್ತು ಇಲಾಖೆಯ ಮುಖ್ಯಸ್ಥ ವಸಂತ್ ಸಾವರ್ಕರ್ ಅವರು ಈ ಮಾಹಿತಿ ನೀಡಿದ್ದಾರೆ.
ವಿದೇಶಿಗರಿಗೆ 1300ಕ್ಕೆ ನಿಗದಿಪಡಿಸಲಾಗಿದೆ. ಆದರೆ ಸಾರ್ಕ್ ದೇಶಗಳ ಪ್ರವಾಸಿಗರು 740 ಪಾವತಿಸಿದರೆ ಸಾಕು. ದರ ಹೆಚ್ಚಳವು ಪ್ರವಾಸಿ ತಾಣದ ಮೇಲಿನ ಜನರ ಒತ್ತಡವನ್ನು ಕಡಿಮೆ ಮಾಡಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ