ಪ್ರಿಯಕರನಿಗಾಗಿ ತನ್ನ ಮನೆಯಲ್ಲಿ 1 ಕೋಟಿ ದೋಚಿದ ಯುವತಿ!!

  ಬೆಂಗಳೂರು:

      ತನ್ನ ಪ್ರಿಯಕರನ ಆಸೆ ಈಡೇರಿಸಲು ತನ್ನ ಸ್ವಂತ ಮನೆಯನ್ನೇ ದರೋಡೆ ಮಾಡಿ, 1 ಕೋ. ರೂ. ಮೌಲ್ಯದ ಚಿನ್ನಾಭರಣ, ನಗದನ್ನು ಕದ್ದೊಯ್ದಿದ್ದಾಳೆ. 

ಘಟನೆಯ ವಿವರ:

      ಗುಜರಾತ್‌ ರಾಜ್‌ಕೋಟ್‌ನ ಉದ್ಯಮಿ ಕಿಶೋರ್ ಪರ್ಸಾನಾ ಎಂಬುವರ 20 ವರ್ಷದ ಮಗಳ ಪ್ರಿಯಾಂಕಾ ಕಳೆದ 2 ವರ್ಷಗಳಿಂದ ಹೇತ್‌ ಶಾ(20) ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಹೇತ್ ಶಾ ಪೈಲಟ್ ಆಗಬೇಕೆಂಬ ಕನಸಿತ್ತು. ಹೀಗಾಗಿ ಬೆಂಗಳೂರಿನಲ್ಲಿರುವ ಪೈಲಟ್ ತರಬೇತಿ ಅಕಾಡೆಮಿಗೆ ಸೇರಲು ಬಯಸಿದ್ದ ಆದರೆ ಶುಲ್ಕ ಪಾವತಿಸಲು ಹಣವಿಲ್ಲ ಎಂಬ ವಿಷಯವನ್ನು ಆತ ಪ್ರಿಯಾಂಕಾಗೆ ತಿಳಿಸಿದ್ದ.

      ಪೈಲಟ್ ಪ್ರವೇಶ ಪಡೆಯಲು 20 ಲಕ್ಷ ರೂ ಕಟ್ಟಬೇಕಿತ್ತು.  ಪ್ರಿಯಕರನ ಪೈಲಟ್‌ ಆಗುವ ಕನಸನ್ನು ಈಡೇರಿಸಲು ನಿರ್ಧರಿಸಿದ ಪ್ರಿಯಾಂಕಾ,  ಆತನಿಗೆ ಸಹಾಯ ಮಾಡಲು ಪ್ರಿಯಾಂಕಾ ತನ್ನ ಮನೆಯಲ್ಲೇ ದರೋಡೆ ಮಾಡುವ ಉಪಾಯ ಮಾಡಿದ್ದಳು. ಇಬ್ಬರು ಸೇರಿ 64 ಸಾವಿರ ನಗದು, 3 ಕೆಜಿ ಚಿನ್ನ ಹಾಗೂ 2 ಕೆಜಿ ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದರು. ಇದು ಯಾರೋ ದರೋಡೆಕೋರರ ಕೃತ್ಯ ಎಂಬ ಭಾವನೆ ಬರಬೇಕೆಂಬ ಉದ್ದೇಶದಿಂದ ಮನೆಯೊಳಗಿನ ವಸ್ತುಗಳನ್ನೆಲ್ಲ ಚೆಲ್ಲಾಪಿಲ್ಲಿಯಾಗಿಸಿ, ಅಲ್ಲಿಂದ ಪರಾರಿಯಾಗಿದ್ದಾಳೆ. 

      ಕಳವು ಸಂಬಂಧ ಪ್ರಿಯಾಂಕಾ ತಂದೆ ಪೊಲೀಸರಿಗೆ ದೂರು ನೀಡಿದ್ದರು. ವಿಚಾರಣೆ ಆರಂಭಿಸಿದ ಪೊಲೀಸರಿಗೆ ಪ್ರಿಯಾಂಕಾ ಮತ್ತು ಹೆತ್ ಶಾ ಮೇಲೆಯೇ ಅನುಮಾನ ಬಂದಿತ್ತು, ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಕೊನೆಗೂ ನೈಜ ಕಳ್ಳರನ್ನು ಹಿಡಿದಿದ್ದಾರೆ.

      ತಮ್ಮ ಮಗಳೇ ಮನೆಯನ್ನು ಧರೋಡೆ ಮಾಡಿದ ವಿಷಯದಿಂದಾಗಿ ಹೆತ್ತವರಿಗೆ ಆಘಾತವಾಗಿದೆ. ಈಗ ಅವರು ಎಫ್‌ಐಆರ್‌ ವಾಪಸ್ ಪಡೆಯಲು ನಿರ್ಧರಿಸಿದ್ದಾರೆ. 

       ಪ್ರೇಮಿಗಳು ‘ಪ್ರೀತಿಗಾಗಿ ಏನು ಬೇಕಿದ್ದರೂ ಮಾಡಲು ಸಿದ್ಧ’ ಎನ್ನುವುದಕ್ಕೆ ಇಲ್ಲಿ ಒಂದು ಸ್ಪಷ್ಟ ನಿದರ್ಶನವೊಂದು ಸಿಕ್ಕಂತಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link