ಸಾಫ್ಟ್‍ವೇರ್ ಉದ್ಯೋಗಿ ಆತ್ಮಹತ್ಯೆ

ಬೆಂಗಳೂರು

          ಮಡಿವಾಳ ಕೆರೆಗೆ ಹಾರಿ ಸಾಫ್ಟ್‍ವೇರ್ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವದಕ್ಕೆ ಕಂಪನಿಯಲ್ಲಿ ನೀಡುತ್ತಿದ್ದ ಒತ್ತಡ ಹಾಗೂ ಕೆಲಸದಿಂದ ತೆಗೆದುಹಾಕಿರುವುದು ಕಾರಣ ಎನ್ನುವುದು ಮೈಕೊಲೇಔಟ್ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

           ಮೈಕೊ ಲೇಔಟ್ ವಿಶ್ವಾಸ್(27) ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಡಿ.13 ರಂದು ಮನೆ ಬಿಟ್ಟು ಹೋಗಿದ್ದ ವಿಶ್ವಾಸ್ ಮೃತದೇಹವು ಡಿ. 20 ರಂದು ಮಡಿವಾಳ ಕೆರೆಯಲ್ಲಿ ಪತ್ತೆಯಾಗಿತ್ತು. ವಿಶ್ವಾಸ್ ಪೋಷಕರು ಮೈಕೊಲೇಔಟ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುವಾಗ ಅಸಲಿ ವಿಷಯ ಪತ್ತೆಯಾಗಿದೆ.
ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ವಿಶ್ವಾಸ್‍ನನ್ನು 1 ತಿಂಗಳ ಹಿಂದೆ ಕಾರ್ಯಕ್ಷಮತೆ (ಪರ್ಫಾರ್ಮೆನ್ಸ್) ಸರಿ ಇಲ್ಲ ಎಂದು ಹೇಳಿ ಆತನನ್ನು ಕೆಲಸದಿಂದ ತೆಗೆದು ಹಾಕಿತ್ತು. ಹಾಗಾಗಿ ವಿಶ್ವಾಸ್ ಕೆಲಸದ ಒತ್ತಡ ಸಹಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

       ಮೃತದೇಹದ ಬಳಿ ಪೊಲೀಸರಿಗೆ ಡೆತ್ ನೋಟ್ ಸಿಕ್ಕಿದೆ. ಪೊಲೀಸರು ಐಪಿಸಿ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಖಾಸಗಿ ಕಂಪನಿಗೆ ನೋಟಿಸ್ ಜಾರಿಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link