ತುರುವೇಕೆರೆ:
ಬೆಲೆ ಏರಿಕೆಯ ನಡುವೆ ಸುಗ್ಗಿ ಸಂಕ್ರಾಂತಿ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸುವ ಸಲುವಾಗಿ ಸಾರ್ವಜನಿಕರು ಸೋಮವಾರ ಪಟ್ಟಣದ ರಸ್ತೆಗಳಲ್ಲಿ ವಸ್ತುಗಳನ್ನು ಖರೀದಿಸುವ ದೃಶ್ಯ ಕಂಡು ಬಂತು.ಪಟ್ಟಣದ ಪ್ರಮುಖ ರಸ್ತೆಗಳ ಎರಡು ಬದಿಯಲ್ಲಿ ಕಬ್ಬು, ಹಸಿ ಕಡಲೆಕಾಯಿ, ಸಿಹಿಗೆಣಸು, ಅವರೇಕಾಯಿ, ಎಳ್ಳುಬೆಲ್ಲಾ, ರಾಶಿ, ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದು ಗ್ರಾಹಕರು ಖರೀದಿಯಲ್ಲಿ ತೊಡಗಿದ್ದರು. ಕಳೆದ ಬಾರಿ 30 ರೂಗಳಿದ್ದ ಅವರೆಕಾಯಿ ಕೆಜಿ 40ಕ್ಕೆ ಏರಿಕೆಯಾಗಿದೆ. ಕಡಲೇಕಾಯಿ, ಸಿಹಿಗೆಣಸು 30 ರೂಗಳಾದರೆ, ಕಬ್ಬು ಒಂದು ಜಲ್ಲೆ 40 ರೂ, ಬಾಳೆಹಣ್ಣು 60 ರೂ, ಸಕ್ಕರೆ ಹಚ್ಚು, ಎಳ್ಳು ಬೆಲ್ಲವನ್ನು ಮಾರಾಟ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
