ಕೊಟ್ಟೂರು
ಹೊಸಪೇಟೆ ಬ್ರಾಡ್‍ಗೇಜ್ ಮಾರ್ಗದ 58ನೇ ರೈಲ್ವೆ ಲೆವೆಲ್ ಕ್ರಾಸಿಂಗ್ ಮುಚ್ಚಲು ಇಲಾಖೆ ಮುಂದಾಗಿದ್ದು ಬೇವೂರು ಗ್ರಾಮಸ್ಥರು ಈ ಮಾರ್ಗಬಂದ್ ಮಾಡದಂತೆ ಸೋಮವಾರ ಉಪ ತಹಶೀಲ್ದಾರ್ ಮಂಜುನಾಥ್‍ಗೆ ಮನವಿ ಸಲ್ಲಿಸಿದ್ದಾರೆ.
ಈ ರೈಲ್ವೆ ಕ್ರಾಸಿಂಗ್ ಮುಚ್ಚುವುದರಿಂದ ಬೇವೂರು ಗ್ರಾಮಸ್ಥರು ನಾಲ್ಕು ಕಿ.ಮೀ. ಬಳಸಿ ಕೊಟ್ಟೂರುಗೆ ಆಗಮಿಸಬೇಕಿದೆ. ಈ ಕ್ರಾಸ್ ಇದ್ದರೆ ಮೂರು ಕಿ.ಮಿ ಸಮೀಪವಾಗುತ್ತದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ.
ರೈಲ್ವೆ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಮಾನವ ರಹಿತ ಲೆವೆಲ್ ಕ್ರಾಸಿಂಗ್‍ಗಳ ಸಂಖ್ಯೆ ಕಡಿಮೆ ಮಾಡುವ ಆದೇಶದಿಂದ ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಆದರೆ ಈ ಮಾರ್ಗವಾಗಿ ಬೇವೂರು, ಕೆ.ಕೋಡಿಹಳ್ಳಿ ಗ್ರಾಮಸ್ಥರಿಗೆ ಕೊಟ್ಟೂರು ಪಟ್ಟಣಕ್ಕೆ ಬರಲು ಬಹುದೂರವಾಗುತ್ತದೆ ಎಂದು ಪತ್ರಿಕೆಯೊಂದಿಗೆ ತಮ್ಮ ಅಳನ್ನು ತೋಡಿಕೊಂಡರು.
ರೈಲ್ವೆ ಇಲಾಖೆ ಮುಚ್ಚಲು ಉದ್ದೇಶಿಸಿರುವ ಈ ಕ್ರಾಸಿಂಗ್‍ನ್ನು ಹಾಗೆ ಉಳಿಸಬೇಕು ಎಂದು ಬೇವೂರು ಗ್ರಾಮಸ್ಥರು ಉಪತಹಶೀಲ್ದಾರ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ದೊಡ್ಡರಾಮಣ್ಣ, ಹ್ಯಾಳ್ಯಾ ಗ್ರಾ.ಪಂ. ಉಪಾಧ್ಯಕ ಪಿ.ಹೆಚ್. ಅಂಜಿನಪ್ಪ, ಕೆ.ಎನ್. ಕೊಟ್ರೇಶ, ಚಾನುಕೋಟಯ್ಯ, ಸಂಪನ್ನ ಬಸವರಾಜ, ಸಂಪನ್ನ ಪ್ರಸನ್ನ,ಈರಪ್ಪ, ಭೀಮಪ್ಪ, ಹನುಮಂತಪ್ಪ, ಮರುಳಸಿದ್ದಪ್ಪ, ಕೊಟ್ರಪ್ಪ, ದೇವೇಶಪ್ಪ, ವೀರಯ್ಯ, ಶಿವಾನಂದ, ನಾಗರಾಜ್, ಮುದುಕಯ್ಯ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ