ಭವಿಷ್ಯ ನಂಬಿ ಭವಿಷ್ಯವಿಲ್ಲದಂತೆ ಮಾಡಿಕೊಂಡ ತಾಯಿ…!!!

ಬೆಂಗಳೂರು

       ತಾಯಿಯೊಬ್ಬಳು ತನ್ನ ಇಬ್ಬರು ಪುಟ್ಟ ಮಕ್ಕಳಿಗೆ ವಿಷ ಊಣಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸ್ ಠಾಣಾ ವ್ಯಾಪ್ತಿಯ ಮುನಿಸಿಪಾಲ್ ಕಾಲೇಜು ಬಳಿ ನಡೆದಿದೆ.

       ನಗರದ ವಿಶ್ವೇಶ್ವರಯ್ಯ ಬಡಾವಣೆಯ ಉಷಾ(30) ಮಕ್ಕಳಾದ ಶಮಂತ್(8), ಶಾನ್ವಿ(6)ಗೆ ವಿಷ ಉಣಿಸಿ ತಾವು ವಿಷ ಸೇವಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಳೆದ 10 ವರ್ಷಗಳ ಹಿಂದೆ ಶಿಕ್ಷಕ ಆಶೋಕ್ ಅವರನ್ನು ವಿವಾಹವಾಗಿದ್ದ ಉಷಾ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮನೆಮಾಡಿಕೊಂಡು ವಾಸಿಸುತ್ತಿದ್ದರು.

       ಮಕ್ಕಳ ಭವಿಷ್ಯ ಚೆನ್ನಾಗಿಲ್ಲ ಎಂಬ ಜ್ಯೋತಿಷಿ ಮಾತನ್ನು ನಂಬಿ ಉಷಾ ಅವರು ಈ ಕೃತ್ಯಕ್ಕೆ ನಡೆಸಿರುವ ಶಂಕೆ ವ್ಯಕ್ತವಾಗಿದೆ ಉಷಾ ತನ್ನ ಸಾವಿಗೆ ಯಾರು ಕಾರಣರಲ್ಲ ಎಂದು ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

       ವಿಷಯ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಚಿಕ್ಕಬಳ್ಳಾಪುರ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಪತಿ ಅಶ್ವತ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link