ಕೇಂದ್ರ ಸಚಿವ ಅನಂತ್​ಕುಮಾರ್​​​​​ ಹೆಗಡೆಗೆ ಜೀವ ಬೆದರಿಕೆ ಕರೆ

   ಫೆ. 17ರಂದು  ಬೆಳ್ಳಗಿನ  ಜಾವ 1.45 ರ ಸುಮಾರಿಗೆ ಸಚಿವರ ಸ್ಥಿರ ದೂರವಾಣಿ ಸಂಖ್ಯೆಗೆ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದೆ. ಅದ ಕಾರಣ ಸೂಕ್ತ ತನಿಖೆ ನಡೆಸಬೇಕು ಎಂದು ಆಪ್ತ ಕಾರ್ಯದರ್ಶಿ ಸುರೇಶ್​ ಶೆಟ್ಟಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಫೆ. 17 ರಂದು ರಾತ್ರಿ 10 ಗಂಟೆಗೆ ಪ್ರಕರಣ ದಾಖಲು ಮಾಡಿದ್ದಾರೆ. 
    ಸಚಿವ ಅನಂತಕುಮಾರ ‌ಹೆಗಡೆ  ಉಗ್ರರ ಕೈಯ್ಯಿಂದ ಹತರಾದ ಯೋಧರ ಕುಟುಂಬಕ್ಕೆ ಸಾಂತ್ವನ ಹೇಳಲು ತಮಿಳುನಾಡಿಗೆ ತೆರಳಿದ್ದು, ಮನೆಯಲ್ಲಿ ಹೆಂಡತಿ ರೂಪಾ ಹೆಗಡೆ ಮಾತ್ರ ಇದ್ದರು. ಈ ವೇಳೆ ಬೆದರಿಕೆ ಕರೆ ಬಂದಿದ್ದು, ಹಿಂದಿಯಲ್ಲಿ “ನಿಮ್ಮ ಪಾಡಿಗೆ ನಿಮ್ಮ ಕೆಲಸ ಮಾಡಿಕೊಂಡಿರಿ. ಅನಂತ್​ಕುಮಾರ್ ಮುಸ್ಲಿಂಮರ ಬಗ್ಗೆ ಮಾತನಾಡಿದರೆ ಚೆನ್ನಾಗಿರಲ್ಲ. ಅವರನ್ನು ಹಾಗೂ ಇಡೀ ಕುಟುಂಬದವರನ್ನು ನೋಡಿಕೊಳ್ಳುತ್ತೇವೆ. ಅನಂತ್​ಕುಮಾರ್ ಹಾಗೂ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ. ನಮಗೆ ಏನು ಮಾಡಬೇಕು ಎಂದು ಗೊತ್ತಿದೆ. ಅಯೋಧ್ಯೆ ಸಮೇತ ಎಲ್ಲವೂ ನಿಮಗೇ ಬೇಕೇ? ಅಯೋಧ್ಯೆಯನ್ನು ತೆಗೆದುಕೊಳ್ಳಲು ಬಿಡುವುದಿಲ್ಲ. ಜೊತೆಗೆ ಅವಾಚ್ಯ ಶಬ್ದಗಳಿಂದ ಮಾತಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. 

   ಸಚಿವರ ಶ್ರೀಮತಿ ರೂಪಾ ಹೆಗಡೆ ಕರೆ ಸ್ವೀಕರಿಸಿದ್ದು, ಮಾನಸಿಕವಾಗಿ ಆಘಾತಗೊಂಡಿರುತ್ತಾರೆ ಹಾಗೂ ಹೆದರಿರುತ್ತಾರೆ  . ಆದ್ದರಿಂದ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸುರೇಶ್​ ಶೆಟ್ಟಿ ದೂರು ದಾಖಲಿಸಿದ್ದಾರೆ. ಸಚಿವರಿಗೆ ಈ ಹಿಂದೆಯೂ ಎರಡು ಮೂರು ಬಾರಿ ಬೆದರಿಕೆ ಕರೆಗಳು ಬಂದಿದ್ದವು ಎಂದು  ತಿಳಿದುಬಂದಿದೆ. 

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link