ಟ್ಯಾಂಕರ್ ಡಿಕ್ಕಿ ಹೊಡೆದು ಫ್ಲಿಪ್ ಕಾರ್ಟ್ ಉದ್ಯೋಗಿ ಸಾವು…!!!

ಬೆಂಗಳೂರು

        ಹಿಂದಿನಿಂದ ಬಂದ ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದು ಬೈಕ್‍ನಲ್ಲಿ ಹೋಗುತ್ತಿದ್ದ ಫ್ಲಿಪ್ ಕಾರ್ಟ್ ಉದ್ಯೋಗಿ ಮೃತಪಟ್ಟಿರುವ ದುರ್ಘಟನೆ ರಾಜಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕಾಮಾಕ್ಷಿಪಾಳ್ಯದ ಸಂತೋಷ್ (19)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಕುಂದಾಪುರ ಮೂಲದ ಸಂತೋಷ್ ಫ್ಲಿಪ್ ಕಾರ್ಟ್‍ನಲ್ಲಿ ಕೆಲಸ ಮಾಡುತ್ತಿದ್ದು,ಬುಧವಾರ ಮಧ್ಯಾಹ್ನ 2ರ ವೇಳೆ ನಂದಿನಿ ಲೇಔಟ್‍ನ ರಾಜೀವ್ ಪಾರ್ಕ್ ಮುಂಭಾಗ ಬೈಕ್‍ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ವಾಟರ್ ಟ್ಯಾಂಕರ್ ಡಿಕ್ಕಿ ಹೊಡೆದಿದೆ.

       ಡಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದ ಸಂತೋಷ್ ತಲೆಮೇಲೆ ವಾಟರ್ ಟ್ಯಾಂಕರ್ ಚಕ್ರ ಹರಿದು ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ರಾಜಾಜಿನಗರ ಸಂಚಾರಿ ಪೊಲೀಸರು, ವಾಟರ್ ಟ್ಯಾಂಕರ್ ವಾಹನವನ್ನು ವಶಪಡಿಸಿಕೊಂಡು ಅಪಘಾತ ಎಸಗಿ ಪರಾರಿಯಾಗಿರುವ ಚಾಲಕನಿಗಾಗಿ ತೀವ್ರಶೋಧ ನಡೆಸಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link