ಹೊಸಪೇಟೆ :
ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗುರುವಾರ ಇಲ್ಲಿನ ಭಾರತೀಯ ವೈಧ್ಯಕೀಯ ಸಂಘದ ನೇತೃತ್ವದಲ್ಲಿ ಸ್ಥಳೀಯ ವೈಧ್ಯರು ಹಾಗು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಶ್ರದ್ದಾಂಜಲಿ ಅರ್ಪಿಸಿದರು.
ನಗರದ ತಾಲೂಕು ಕ್ರೀಡಾಂಗಣದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಟಿಎಂಎಇ ಆಯುರ್ವೇದ ಮೆಡಿಕಲ್ ಕಾಲೇಜ್, ಆಯುಷ್ಯ ಸಂಘ, ಭಾರತೀಯ ದಂತ ವೈಧ್ಯಕೀಯ ಸಂಘ ಹಾಗು ಸಪ್ತಗಿರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತ, ರೋಟರಿ ವೃತ್ತದಲ್ಲಿ ಜಮಾವಣೆಗೊಂಡು ಹುತಾತ್ಮ ಯೋಧರಿಗೆ ಸಂತಾಪ ಸೂಚಿಸಿದರು
ಈ ಸಂಧರ್ಭದಲ್ಲಿ ವೈಧ್ಯರಾಧ ಡಾ.ಯುವರಾಜ, ಡಾ.ಮಂಜುನಾಥ, ಡಾ.ರಾಘವೇಂದ್ರರಾವ್, ಡಾ.ರಾಘವೇಂದ್ರ ಕಟ್ಟಿ, ಡಾ.ಮಂಜುಳಾ, ಡಾ.ಇಕ್ಬಾಲ್, ಡಾ.ರಾಜೀವ, ಡಾ.ಯರಿಯಪ್ಪ, ಡಾ.ಅಶೋಕ ದಾತರ್, ಡಾ.ಅಜೇಯ್, ಡಾ.ಸತ್ಯನಾರಾಯಣ, ಡಾ.ಸುಮಂಗಳಮ್ಮ, ಡಾ.ಜಯರಾಮ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
