ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ವಿದ್ಯಾರ್ಥಿ ಸಾವು…!!!

ಬೆಂಗಳೂರು

        ಹೊಂಗೆ ಮರಕ್ಕೆ ನೇಣು ಬಿಗಿದುಕೊಂಡು ಪದವಿ ವಿದ್ಯಾರ್ಥಿಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ದುರ್ಘಟನೆ ಚಿಕ್ಕಬಳ್ಳಾಪುರದ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

       ದೊಡ್ಡಬಳ್ಳಾಪುರದ ಶಿವಪುರದ ಮದನ್ ಗೌಡ(21)ಎಂದು ಮೃತ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ.ಚಿಕ್ಕಬಳ್ಳಾಪುರದ ಹೊರವಲಯದ ಎಸ್‍ಜೆಸಿಐಟಿ ಪದವಿ ಕಾಲೇಜಿನಲ್ಲಿ ಎರಡನೇ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದು, ಕಾಲೇಜು ಬಳಿಯ ತುಮಕಲಹಳ್ಳಿಯಲ್ಲಿ ಸ್ನೇಹಿತರ ಜೊತೆ ರೂಮ್ ನಲ್ಲಿ ವಾಸವಾಗಿದ್ದನು.

        ಭಾನುವಾರ ರಾತ್ರಿ ಊಟ ಮಾಡಿ ಹೊರಗಡೆ ಹೋಗಿದ್ದ ಮದನ್ ಗೌಡ ಸೋಮವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಕಾಲೇಜಿಗೂ ಹಾಗೂ ಮದನ್ ಗೌಡ ವಾಸವಾಗಿದ್ದ ರೂಂಗೆ ಸ್ವಲ್ಪ ದೂರದ ತೋಟವೊಂದರಲ್ಲಿ ಹೊಂಗೆ ಮರದಲ್ಲಿ ನೇತಾಡುವ ಸ್ಥಿತಿಯಲ್ಲಿ ಮದನ್ ಗೌಡ ಶವ ಪತ್ತೆಯಾಗಿದೆ.

         ನೇಣಿಗೆ ವಿದ್ಯುತ್ ವೈರ್ ಗಳನ್ನು ಬಳಸಿದ್ದು, ಇದು ಆತ್ಮಹತ್ಯೆಯೋ, ಇಲ್ಲ ಕೊಲೆಯೋ ಅನುಮಾನ ಮೂಡಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link