ಮುಂಬೈ: 

ಮಹಾರಾಷ್ಟ್ರ ಸರ್ಕಾರದ ಮಿತ್ರ ಪಕ್ಷವಾದ ಶಿವಸೇನೆ ಬಿಜೆಪಿಗೆ ಶಾಕ್ ನೀಡಿದೆ ಅದೇನೆಂದರೆ ಶಿವಸೇನೆ ಏರ್ ಸ್ಟ್ರೈಕ್ ನ ದಾಖಲೆ ಕೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಸವಾಲೊಡ್ಡಿದ್ದೆ.
ಭಾರತೀಯ ವಾಯುಪಡೆ ಪಾಕಿಸ್ತಾನ ನೆಲದಲ್ಲಿ ವೈಮಾನಿಕ ದಾಳಿ ನಡೆಸಿರುವುದಕ್ಕೆ ಸಾಕ್ಷ್ಯ ಬಿಡುಗಡೆ ಕೊಡಿ ಎಂದು ಆಗ್ರಹಿಸುತ್ತಿರುವ ಪ್ರತಿಪಕ್ಷಗಳ ಹೇಳಿಕೆಯನ್ನು ಶಿವಸೇನೆಯೂ ಸರ್ಮಥನೆ ಮಾಡಿದೆ.
ದೇಶದ ಜನತೆಗೆ ಪಾಕಿಸ್ತಾನದ ಉಗ್ರ ಸಂಘಟನೆ ಜೈಶ್-ಇ-ಮೊಹಮ್ಮದ್ ಸಂಘಟನೆಯ ಅಡಗುತಾಣಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ನಿರ್ನಾಮವಾದ ಉಗ್ರರ ಬಗ್ಗೆ ಮಾಹಿತಿ ಕೇಳುವ ಹಕ್ಕು ಈ ದೇಶದ ಜನತೆಗೆ ಇದೆ, ಈ ಮಾಹಿತಿಗಳನ್ನು ಬಹಿರಂಗಗೊಳಿಸುವುದರಿಂದ ಸೇನೆಯ ನೈತಿಕತೆಯನ್ನು ಕುಗ್ಗಿಸಿದಂತೇನು ಆಗುವುದಿಲ್ಲ ಎಂದು ಶಿವಸೇನೆ ಹೇಳುವ ಮೂಲಕ ವಿಪಕ್ಷಗಳ ಕೂಗಿಗೆ ಧನಿಗೂಡಿಸಿದೆ.
ಶಿವಸೇನೆಯ ಸಾಮ್ನಾ ಪತ್ರಿಕೆಯಲ್ಲಿ ಈ ಕುರಿತು ಸಂಪಾದಕೀಯ ಪ್ರಕಟಿಸಿರುವ ಶಿವಸೇನೆ, ವೈಮಾನಿಕ ದಾಳಿಯ ಬಗ್ಗೆ ಮುಂಬರುವ ಲೋಕಸಭಾ ಚುನಾವಣೆವರೆಗೂ ಚರ್ಚೆಯಲ್ಲಿಯೇ ಇರುತ್ತದೆ. ಫೆ.14 ಕ್ಕಿಂತ ಮುನ್ನ ಪ್ರತಿಪಕ್ಷಗಳು ಪ್ರಸ್ತಾಪಿಸಿದ್ದ ಮಹತ್ವದ ಅಂಶಗಳೆಲ್ಲವೂ ಈಗ ನಗಣ್ಯವಾಗಿದೆ ಎಂದು ಹೇಳಿದೆ. ಇದೇ ವೇಳೆ ಪುಲ್ವಾಮ ದಾಳಿಯ ಬಗ್ಗೆಯೂ ಸಂಪಾದಕೀಯದಲ್ಲಿ ಪ್ರಕಟಿಸಿರುವ ಶಿವಸೇನೆ, ಪುಲ್ವಾಮ ದಾಳಿ ನಡೆಸಿದ ಉಗ್ರನಿಗೆ 300 ಕೆ.ಜಿಯಷ್ಟು ಆರ್ ಡಿಎಕ್ಸ್ ಎಲ್ಲಿಂದ ಸಿಕ್ಕಿತು? ಎಂದು ಶಿವಸೇನೆ ಪ್ರಶ್ನಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








