ಬ್ಯಾಂಕ್ ಸಾಲ ಬಾಕಿ ಅಭ್ಯರ್ಥಿಗಳನ್ನು ಚುನಾವಣೆಗೆ ಅನರ್ಹರೆಂದು ಘೋಷಿಸಲು ಆಯೋಗಕ್ಕೆ ಆಗ್ರಹ

ಹೈದರಾಬಾಧ್

          ಮುಂಬರುವ 17ನೇ ಲೋಕಸಭೆ ಚುನಾವಣೆಯಲ್ಲಿ ಬ್ಯಾಂಕ್ ಸಾಲ ಬಾಕಿ ಇಟ್ಟಿರುವ ಅಭ್ಯರ್ಥಿಗಳನ್ನು ಅನರ್ಹಗೊಳಿಸಬೇಕು ಎಂದು ಆಲ್ ಇಂಡಿಯಾ ಬ್ಯಾಂಕ್ ನೌಕರರ ಸಂಘ ಮುಖ್ಯ ಚುನಾವಣಾ ಅಧಿಕಾರಿಗೆ ಮನವಿ ಮಾಡಿದೆ.

         ಏಪ್ರಿಲ್ 11ರಿಂದ ಮೇ 19ರವರೆಗೆ ವಿವಿಧ ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ಕಣಕ್ಕೆ ಇಳಿದಿರುವ ಬಹುತೇಕ ಅಭ್ಯರ್ಥಿಗಳು ಬ್ಯಾಂಕ್ ಸಾಲ ಪಾವತಿಸದೇ ಬಾಕಿ ಇಟ್ಟಿದ್ದಾರೆ. ಉದ್ಯಮಿಗಳು ಹಾಗೂ ಶ್ರೀಮಂತರೇ ದೊಡ್ಡ ಪ್ರಮಾಣದ ಬ್ಯಾಂಕ್ ಸಾಲ ಪಡೆದಿದ್ದು, ಉದ್ದೇಶಪೂರ್ವಕವಾಗಿ ಸಾಲ ಬಾಕಿ ಇಟ್ಟಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

        ಸದ್ಯ ಬ್ಯಾಂಕ್ ಸಾಲ ಬಾಕಿಯು ನಾಗರಿಕ ಅಪರಾಧವಾಗಿದ್ದು, ಅವರ ವಿರುದ್ಧ ಯಾವುದೇ ಅಪರಾಧ ಪ್ರಕರಣದ ಪ್ರಕ್ರಿಯೆ ಆರಂಭಿಸಲು ಸಾಧ?ಯವಾಗುತ್ತಿಲ್ಲ ಎಂದು ಆಲ್ ಇಂಡಿಯಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ಹೇಳಿದ್ದಾರೆ.

      ಬ್ಯಾಂಕ್ ಸಾಲ ಮರುಪಾವತಿಸದವರ ಹೆಸರುಗಳನ್ನು ನಿಯತಕಾಲಿಕವಾಗಿ ಪ್ರಕಟಿಸುಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಯವುದೇ ಉಪಯೋಗವಾಗಿಲ್ಲ. ಉದ್ದೇಶಪೂರ್ವಕವಾಗಿ ಸಾಲ ಬಾಕಿ ಇಟ್ಟಿರುವವರ ವಿರುದ್ಧ ಅಪರಾಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದೇವೆ. ಆದರೆ, ಸರ್ಕಾರ ವಿಳಂಬ ಮಾಡುವ ಮೂಲಕ ತಪ್ಪಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

         ಇದು ಹೀಗೆ ಮುಂದುವರಿದರೆ ಸಾಲ ಪಡೆಯಲು ಹಾಗೂ ಬ್ಯಾಂಕ್ ಗಳನ್ನು ವಂಚಿಸಲು ದೊಡ್ಡ ಸಾಲಗಾರರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಬ್ಯಾಂಕ್ ಗೆ ವಂಚನೆ ಮಾಡುವುದೆಂದರೆ ಜನರಿಗೆ ವಂಚನೆ ಮಾಡಿದ ಹಾಗೆ. ಜನರು ಇಟ್ಟ ಹಣವನ್ನೇ ಬ್ಯಾಂಕ್ ಗಳು ಸಾಲದ ರೂಪದಲ್ಲಿ ನೀಡುತ್ತವೆ ಎಂದು ವೆಂಕಟಾಚಲಂ ಹೇಳಿದ್ದಾರೆ.

        ಮುಂಬರುವ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿರುವುದರಿಂದ ಬ್ಯಾಂಕ್ ಸಾಲ ಬಾಕಿ ಇಟ್ಟಿರುವವರಿಗೆ ನೋಟಿಸ್ ಜಾರಿಗೊಳಿಸಿ ಕ್ರಮ ಕೈಗೊಳ್ಳಲು ವಿಶೇಷ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link