ವಿದ್ಯಾರ್ಥಿಗಳು ಸ್ವಯಂ ಯೋಚಿಸುವ ಗುಣ ಬೆಳೆಸಿಕೊಳ್ಳಿ: ಸಿ ಎನ್ ಆರ್ ರಾವ್

ಬೆಂಗಳೂರು

        ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ನಿರ್ಧಿಷ್ಟ ವಿಷಯಗಳತ್ತ ಕುತೂಹಲ ಬೆಳೆಸಿಕೊಂಡು ಸೂಕ್ಷ್ಮವಾಗಿ ಅಭ್ಯಾಸ ಮಾಡಿ ಸ್ವಯಂ ಯೋಚಿಸುವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಭವಿಷ್ಯದ ಅತ್ಯುತ್ತಮ ವಿಜ್ಞಾನಿಗಳಾಗಿ ಬೆಳೆಯಬೇಕು ಎಂದು ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

        ನಗರದ ನಿಮ್ಹಾನ್ಸ್ ಸಭಾಂಗಣದಲ್ಲಿರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದ ಅವರು ಮನುಕುಲದ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಗೆ ವಿಜ್ಞಾನ ಕ್ಷೇತ್ರದ ಕೊಡುಗೆ ಅಪಾರವಾಗಿರವುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದರು
ವಿಜ್ಞಾನ ವಿಷಯದ ವಿದ್ಯಾರ್ಥಿಗಳು ವಿಜ್ಞಾನ ಜ್ಞಾನವನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಹಲವು ವಿಜ್ಞಾನಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ್ದಾರೆ ಎಂದ ಅವರು, ವಿಜ್ಞಾನ ಮತ್ತು ಸಂಶೋಧನೆಯೂ ಜೊತೆಯಾಗಿ ಸಾಗಬೇಕು ಎಂದು ಹೇಳಿದರು.

        ವಿವಿಯ ಕುಲಪತಿ ಡಾ.ಎಸ್.ಸಚ್ಚಿದಾನಂದ ಮಾತನಾಡಿ, ಎಲ್ಲ ವಿಭಾಗದ ಒಟ್ಟು ಫಲಿತಾಂಶ ಶೇ. 81.11 ಆಗಿದೆ. ಈ ವರ್ಷ ದಂತ ವೈದ್ಯ ಡಾ| ಕೆ.ಎಸ್. ನಾಗರಾಜು ಅವರಿಗೆ ಡಾಕ್ಟರ್ ಆಫ್ ಸೈನ್ಸ್(ಗೌರವ ಡಾಕ್ಟರೇಟ್) ಪ್ರದಾನ ಮಾಡಲಾಯಿತು ಎಂದು ತಿಳಿಸಿದರು.

       ಭಾರತೀಯ ವೈದ್ಯಕೀಯ ಪರಿಷತ್(ಎಂಸಿಐ) ಆಡಳಿತ ಮಂಡಳಿಯು ಸ್ನಾತಕೋತ್ತರ ಡಿಪೆÇ್ಲಮಾ ಕೋರ್ಸ್‍ಗಳ ಉಳಿಕೆ ಸೀಟುಗಳನ್ನು ಎಂ.ಡಿ. ಮತ್ತು ಎಂ.ಎಸ್ ಸೀಟಗಳಿಗೆ ವರ್ಗಾಯಿಸಲು ಅನುಮತಿ ನೀಡಿದೆ ಎಂದರು.

        ಘಟಿಕೋತ್ಸವದಲ್ಲಿ 30,556 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಪದವಿ ಪಡೆದರು.ಇದರಲ್ಲಿ 44 ಪಿಎಚ್.ಡಿ, 129 ಸೂಪರ್ ಸ್ಪೆಷಾಲಿಟಿ(ಡಿಎಂ, ಎಂಸಿಎಚ್), 5,711 ಸ್ನಾತಕೋತ್ತರ, 175 ಫೆಲೊಶಿಪ್ ಕೋರ್ಸ್, 16 ಪ್ರಮಾಣಪತ್ರ ಕೋರ್ಸ್ ಮತ್ತು 24,481 ಪದವಿ ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು

7 ಸ್ವರ್ಣ ಪದಕ

      ಮಂಗಳೂರಿನ ಎ.ಜೆ.ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪದವಿ ವಿದ್ಯಾರ್ಥಿ ಡಾ|ವಲ್ಲೀಶ್ ಶೆಣೈ ಏಳು ಸ್ವರ್ಣ ಪದಕಗಳು ಮತ್ತು ಒಂದು ನಗದು ಬಹುಮಾನ ಪಡೆದುಕೊಂಡು ವಿಶ್ವವಿದ್ಯಾಲಯಕ್ಕೆ ಟಾಪರ್ ಆಗಿದ್ದಾರೆ. ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ವಿ.ಆರ್. ವಾಲಾ ವಹಿಸಿದ್ದರು. ವಿವಿಯ ವಿವಿಧ ವಿಭಾಗದ ಮುಖ್ಯಸ್ಥರು ಸೇರಿದಂತೆ ಪ್ರಮುಖರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link