ಮನಸೋ ಇಚ್ಚೆ ಇರಿದು ಚೌಕಿ ನನರಸಿಂಹನ ಕೊಲೆ..!!!

ಬೆಂಗಳೂರು

        ತೆಗೆದುಕೊಂಡು ಹೋಗಿದ್ದ ಬೈಕ್ ವಾಪಸ್ ಕೊಡಲು ನಿರಾಕರಿಸಿದ ಕುಖ್ಯಾತ ಕಳ್ಳ ನರಸಿಂಹ ಅಲಿಯಾಸ್ ಚೌಕಿ ನರಸಿಂಹನನ್ನು ಸ್ನೇಹಿತರೇ ಡ್ರಾಗರ್‍ನಿಂದ ಮನಸೋಇಚ್ಛೆ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.

       ಹೆಗ್ಗನಹಳ್ಳಿಯ ಚೌಕಿ ನರಸಿಂಹ(25)ನಿಗೆ 15ರಿಂದ 20 ಕಡೆ ಇರಿದು ಕೊಲೆ ಮಾಡಿ ಪರಾರಿಯಾಗಿದ್ದು ಬೈಕ್ ವಾಪಸ್ ನೀಡಿದ ಕಾರಣಕ್ಕೆ ರೊಚ್ಚಿಗೆದ್ದು ಸ್ನೇಹಿತರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಕೊಲೆಯಾದ ಚೌಕಿ ಮನೆಕಳವು ಹೆದ್ದಾರಿ ಕಳವು ಡಕಾಯಿತಿಯತ್ನ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಅಮಲಿನಲ್ಲಿ ಕೃತ್ಯ

        ಹೆಗ್ಗನಹಳ್ಳಿಯಿಂದ ರಾತ್ರಿ ನಂದಿನಿಲೇಔಟ್‍ಗೆ ಬಂದಿದ್ದ ನರಸಿಂಹ ಸ್ನೇಹಿತ ಜೊತೆ ಬಾರ್‍ವವೊಂದರಲ್ಲಿ ಕುಡಿದಿದ್ದಾರೆ ಅಲ್ಲಿಂದ ಮಧ್ಯರಾತ್ರಿ 12.20ರ ವೇಳೆ ಹೊರಟು ರಾಜಗೋಪಾಲ್‍ನಗರದ ಅನ್ನಪೂರ್ಣೇಶ್ವರಿ ನಗರಕ್ಕೆ ರಸ್ತೆ ಬಳಿ ಬೈಕ್ ವಾಪಸ್ ಕೊಡದ ವಿಷಯವಾಗಿ ಜಗಳ ಮಾಡಿಕೊಂಡಿದ್ದಾರೆ.

       ಜಗಳ ವಿಕೋಪಕ್ಕೆ ತಿರುಗಿದಾಗ ರೊಚ್ಚಿಗೆದ್ದ ಮೂರ್ನಾಲ್ಕು ಮಂದಿ ನರಸಿಂಹ ಎದೆ ಹೊಟ್ಟೆ ಕುತ್ತಿಗೆ ಇನ್ನಿತರ ಕಡೆಗಳಲ್ಲಿ 15 ರಿಂದ 20 ಕಡೆಯಿಂದ ಕೊಲೆಗೈದು ಪರಾರಿಯಾಗಿದ್ದು ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಧಾವಿಸಿದ ರಾಜಗೋಪಾಲನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರು ಚಾಲಕ

         ಅಪರಾಧ ಕೃತ್ಯಕ್ಕೆ 8 ವರ್ಷಗಳ ಹಿಂದೆಯೇ ಕಾಲಿಟ್ಟಿದ್ದ ನರಸಿಂಹ ಕೆಂಗೇರಿಯಲ್ಲಿ ಮನೆಕಳವು ಹಿರಿಯೂರು ಬಳಿ ಹೆದ್ದಾರಿ ಕಳವು ತುರುವೇಕೆರೆಯಲ್ಲಿ ಕಳವು ಡಕಾಯಿತಿ ಯತ್ನಗಳಲ್ಲಿ ಭಾಗಿಯಾಗಿ ಹಿಂದೆ ಜೈಲಿಗೆ ಹೋಗಿ ಬಿಡುಗಡೆಯಾಗಿ ಬಂದಿದ್ದ ಇತ್ತೀಚಿಗೆ ಕಾರು ಚಾಲಕನಾಗಿ ಕೆಲಸಕ್ಕೆ ಹೋಗುತ್ತಾ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ.

       ಪರಿಚಯಸ್ಥನ ಬೈಕ್ ಪಡೆದುಕೊಂಡು ವಾಪಸ್ ಕೊಡದೇ ಸತಾಯಿಸಿರುವುದು ಆತನ ಕೊಲೆಗೆ ಕಾರಣವಾಗಿದ್ದು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link