ಮೋಜಿನ ಜೀವನಕ್ಕಾಗಿ ಕಳವು ಮಾಡುತ್ತಿದ್ದವನ ಬಂಧನ …!!!

ಬೆಂಗಳೂರು

       ಮೋಜಿನ ಜೀವನಕ್ಕಾಗಿ ಮನೆ ಕಳವು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಹೆಬ್ಬಗೋಡಿ ಪೊಲಿಸರು 9ಲಕ್ಷ 50 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

        ಹೆಬ್ಬಗೋಡಿಯ ವಿಜಯ್, ಮಂಜುನಾಥ್,ರಜೀಯಾ ಮತ್ತು ಬಾಬಾಜಾನ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 2.50 ಲಕ್ಷ ಬೆಲೆ ಬಾಳುವ ಚಿನ್ನಾಭರಣ ಹಾಗೂ ಏಳು ಲಕ್ಷ ಬೆಲೆ ಬಾಳುವ 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

         ಆರೋಪಿಗಳ ಪತ್ತೆಗೆ ಬೆಂಗಳೂರು ಗ್ರಾಮಾಂತರ ಡಿವೈಎಸ್‍ಪಿ ನಂಜುಡೇಗೌಡ ಹಾಗೂ ಹೆಬ್ಬಗೋಡಿ ಪೊಲಿಸ್ ಠಾಣೆಯ ಜಗದೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದೆ.

         ಬಂಧಿತ ಆರೋಪಿಗಳ ವಿರುದ್ಧ ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಬೆಳ್ಳಂದೂರು, ಸೇರಿದಂತೆ ಹಲವು ಪೆÇಲೀಸ್ ಠಾಣೆಗಳಲ್ಲಿ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಆರೋಪಿಗಳನ್ನು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ ಎಂದು ಗ್ರಾಮಾಂತರ ಎಸ್‍ಪಿ ಡಾ.ರಾಮ್‍ನಿವಾಸ್ ತಿಳಿಸಿದ್ದಾರೆ

ಯುವಕನ ಮೇಲೆ ಹಲ್ಲೆ

        ನಡೆದುಕೊಂಡು ಹೋಗುವಾಗ ಬೊಗಳಿದ ಸಾಕು ನಾಯಿಯನ್ನು ಗದರಿಸಿ ನಿಂದಿಸಿದ್ದರಿಂದ ಆಕ್ರೋಶಗೊಂಡು ನಾಲ್ಕೈದು ಮಂದಿ ಯುವಕನೋರ್ವನನ್ನು ನೆಲದ ಮೇಲೆ ಬೀಳಿಸಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಗಂಭೀರ ಹಲ್ಲೆ ನಡೆಸಿರುವ ದುರ್ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

         ಹಲ್ಲೆಗೊಳಗಾಗಿರುವ ಪರಪ್ಪನ ಅಗ್ರಹಾರದ ಹೊಸರೋಡುವಿನ ಹರೀಶ್ (25) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಸ್ಥಿತಿ ಗಂಭೀರವಾಗಿದೆ ಕಳೆದ ಎ.4 ರಂದು ಹರೀಶ್ ತನ್ನ ಅತ್ತೆ ಭಾಗ್ಯಮ್ಮನ ಮನೆಗೆ ಹೋಗುತ್ತಿದ್ದಾಗ ವಿಜಯ್ ಎಂಬಾತನ ನಾಯಿ ಕಚ್ಚಿತ್ತು. ಆಗ ಹರೀಶ್ ನಾಯಿಯನ್ನ ಕಟ್ಟಿ ಹಾಕುವಂತೆ ವಿಜಯ್‍ಗೆ ಸೂಚಿಸಿದ್ದು ಇದರಿಂದ ರೊಚ್ಚಿಗೆದ್ದ ವಿಜಯ್ ಆತನ ಸಹಚರರಾದ ಗಣೇಶ್, ಅಂಬರೀಶ್, ನಿಖಿಲ್ ಚಂದ್ರಶೇಖರ್ ಜೊತೆ ಸೇರಿಕೊಂಡು ಹರೀಶ್‍ನನ್ನು ಅಡ್ಡಗಟ್ಟಿದ್ದಾನೆ.

        ಆತನಿಗೆ ಕಾಲಿನಿಂದ ಒದ್ದು, ಕಲ್ಲು ಎತ್ತಿ ಹಾಕಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರು ಹರೀಶ್‍ನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಯಿಂದ ಹರೀಶ್‍ನ ಒಂದು ಕಣ್ಣು, ಸೊಂಟದ ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು, ತಲೆಗೆ ತೀವ್ರ ಗಾಯವಾಗಿದೆ. ಹಲ್ಲೆ ಸಂಬಂಧ ಹರೀಶ್ ದೂರು ನೀಡಲು ಪರಪ್ಪನ ಅಗ್ರಹಾರ ಪೆÇಲೀಸ್ ಠಾಣೆಗೆ ತೆರಳಿದ್ದ ವೇಳೆ ಅಲ್ಲಿಗೂ ಬಂದು ಕೊಲೆ ಬೆದರಿಕೆ ಹಾಕಿದ್ದಾರೆ. ಆರೋಪಿಗಳ ವಿರುದ್ಧ ಪೆÇಲೀಸರು ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link