ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣೆ ಆಗಿದೆ : ನಾಗಮೋಹನ್ ದಾಸ್

ಬೆಂಗಳೂರು

        ಸಾಮಾಜಿಕ ಜಾಲತಾಣಗಳ ಮೂಲಕ ಹರಡಿಸುತ್ತಿರುವ ಹಸಿ ಸುಳ್ಳುಗಳಿಂದ ಮತದಾರರನ್ನು ರಕ್ಷಿಸ ಬೇಕಾದ ತುರ್ತು ಅಗತ್ಯತೆ ಇದೆ ಎಂದು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

       ಸಾಮಾಜಿಕ ಜಾಲತಾಣಗಳ ಸಂಪರ್ಕದಲ್ಲಿರುವ ಶೇ.50 ರಷ್ಟು ಮತದಾರರಿಗೆ ಸುಳ್ಳು ಸುದ್ದಿಗಳು ತಲುಪುವ ಅಪಾಯವಿದ್ದು ಇದರಿಂದ ಮತದಾರರನ್ನು ಹೊರತರಬೇಕಾಗಿದೆ ಎಂದು ಅವರು ತಿಳಿಸಿದರು.

        ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ, ಚುನಾವಣೆ ಮತ್ತು ಮಾಧ್ಯಮ ಕುರಿತ ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಆದರೂ ಧರ್ಮ, ಜಾತಿ, ಹಣ ಅಪರಾಧೀಕರಣ ಸಮಾಜಿಕ ಅನಿಷ್ಟಗಳಿಗೆ ಬಲಿಯಾಗಿದೆ. ಇದರಿಂದ ಜನರನ್ನು ಹೊರಗೆ ತರಲು ಮಾಧ್ಯಮ ಕಾರ್ಯನಿರ್ಹಿಸಲಿದೆ ಎಂದರು.

        ಸರ್ಕಾರದ ವೈಫಲ್ಯ ಮತ್ತು ಸಾಧನೆಗಳನ್ನು ಜನರ ಗಮನಕ್ಕೆ ತರಬೇಕಾಗಿದೆ.ಇಷ್ಟು ಮಾಡಿದರೆ ಜನತೆ ನಿರ್ಧಾರಿಸುತ್ತಾರೆ ಎಂದ ಅವರು,ನಮ್ಮ ಮಧ್ಯೆ ಕ್ರಿಮಿನಲ್, ಕೋಟ್ಯಾಧಿಪತಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಚುನಾವಣೆ ಕಣದಲ್ಲಿದ್ದಾರೆ.ಅಷ್ಟೇ ಅಲ್ಲದೆ, ಮಹಿಳೆಯರ ಬಗ್ಗೆ ಕಾಳಜಿ ಇರುವ ಜನಪ್ರತಿನಿಧಿಗಳ ಸಂಖ್ಯೆಯೂ ಕುಸಿದಿದೆ ಎಂದರು.

       ಸಂಸತ್ತಿನಲ್ಲಿ ಆರೋಗ್ಯಕರ ಚರ್ಚೆ ಆಗಬೇಕಿತ್ತು.ಆದರೆ, ಗದ್ದಲ,ಕೂಗಟ, ಸತ್ಯಾಗ್ರಹ ಇಲ್ಲದೇ, ಶೇ.48 ಬಿಲ್ ಗಳು ಚರ್ಚೆ ನಡೆಸಿಲ್ಲ. ಇನ್ನೂ, ಕೆಲವು ಮಸೂದೆಗಳನ್ನು ಚರ್ಚೆಯಿಲ್ಲದೆ ಪಾಸಾಗಿವೆ. ಇವುಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

        ಚುನಾವಣೆ ಇಲ್ಲದೆ ಪ್ರಜಾಪ್ರಭುತ್ವ ಇರಲು ಸಾಧ್ಯವಿಲ್ಲ. ಅದೇ ರೀತಿ, ಮಾಧ್ಯಮವೂ ಸಹ ಚುನಾವಣಾ ಪ್ರಕ್ರಿಯೆಗೆ ಅಗತ್ಯವಾಗಿದೆ.ಈಗಾಗಲೇ ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ 16 ಸಾರ್ವತ್ರಿಕ ಚುನಾವಣೆ ಮುಗಿದೆ. 17ಕ್ಕೆ ಸಿದ್ದವಾಗಿದ್ದೇವೆ.ಒಬ್ಬೊಬ್ಬ ಅಭ್ಯರ್ಥಿಗಳಿಗೂ ಒಂದೊಂದು ಧೋರಣೆ ಇದೆ. ಇಂತಹ ಸಂದರ್ಭದಲ್ಲಿ ಜನತೆಗೆ ಚುನಾವಣೆಯ ಬಗ್ಗೆ ಸಮಾಜದ ಬಗ್ಗೆ, ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಸಲಹೆ ಮಾಡಿದರು.

       ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಮಾಜಕ್ಕೆ ಪತ್ರಕರ್ತನು ವೈದ್ಯನಿದ್ದಂತೆ. ಹೀಗಾಗಿ ನೈತಿಕತೆಯಿಂದ ಪ್ರಮಾಣಿಕವಾಗಿ ತನ್ನ ವೃತ್ತಿಯನ್ನು ಮುನ್ನಡೆಸಿಕೊಂಡು ಹೋಗುವುದು ಅಗತ್ಯವಿದೆ ಎಂದು ನುಡಿದರು.ಬಿ.ವಿ.ಮಲ್ಲಿಕಾರ್ಜುನಯ್ಯ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಯಾವುದೆ ಪಕ್ಷವನ್ನು ಓಲೈಸಬಾರದು. ಜಾತ್ಯಾತೀತ, ಪಕ್ಷಾತೀತವಾಗಿ ಮಾಹಿತಿಯನ್ನು ನೀಡಬೇಕು.

        ಪತ್ರಿಕೋದ್ಯಮದ ದಿಕ್ಕು, ದೆಸೆ ಸರಿಯಾದ ಮಾರ್ಗದಲ್ಲಿ ಹೋಗಬೇಕಾಗಿದೆ. ದೇಶದ ಹಿತದ ದೃಷ್ಟಿಯೇ ಮೊದಲ ಆದ್ಯತೆಯಾಗಬೇಕು ಎಂದು ಅವರು ತಿಳಿಸಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಸಂಘದ ಲೋಕೇಶ್, ಉಮೇಶ್ ಸೇರಿದಂತೆ ಪ್ರಮುಖರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link