ಹಳೆಯ ದ್ವೇಷ: ಅಟ್ಟಾಡಿಸಿ ಯುವಕನ ಬರ್ಬರ ಹತ್ಯೆ..!!

ಬೆಂಗಳೂರು

         ಹಳೆ ದ್ವೇಷದ ಹಿನ್ನಲೆಯಲ್ಲಿ ಯುವಕನೊಬ್ಬನನ್ನು ಅಟ್ಟಾಡಿಸಿಕೊಂಡು ಹೋಗಿ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

       ಆನೇಕಲ್‍ನ ಲೋಕನಾಥ್(24)ಎಂದು ಕೊಲೆಯಾದ ಯುವಕನನ್ನು ಗುರುತಿಸಲಾಗಿದೆ ಶುಕ್ರವಾರ ರಾತ್ರಿ 12.30ಕ್ಕೆ ಸುಮಾರಿಗೆ ಹೇಮಂತ್, ಹರೀಶ್ ಅವರಿದ್ದ ಗುಂಪು ಲೋಕನಾಥ್‍ನನ್ನು ಮಾತನಾಡೋಣ ಎಂದು ನಂಬಿಸಿ ಕರೆದುಕೊಂಡು ಹೋಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

        ಕೊಲೆಯಾದ ಲೋಕನಾಥ್ ಮತ್ತು ಆರೋಪಿಗಳಾದ ಹೇಮಂತ್ ಮತ್ತು ಹರೀಶ್ ಗುಂಪಿನ ಮಧ್ಯೆ ಒಂದು ವಾರದ ಹಿಂದೆ ಸಣ್ಣ-ಪುಟ್ಟ ವಿಚಾರಗಳಿಗೆ ಗಲಾಟೆ ನಡೆದಿತ್ತು. ಮಾಹಿತಿ ತಿಳಿದ ಪೆÇಲೀಸರು ಎರಡೂ ಗುಂಪುಗಳನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು.ಆದರೂ ಲೋಕನಾಥ್‍ನನ್ನು ಕೊಲೆ ಮಾಡಲು ದ್ವೇಷದಿಂದ ಕುದಿಯುತ್ತಿದ್ದ ಹೇಮಂತ್ ಗುಂಪು ಸಂಚು ಮಾಡಿತ್ತು.

       ಆನೇಕಲ್‍ನಲ್ಲಿ ಶುಕ್ರವಾರ ಜಾತ್ರೆ ನಡೆಯುತ್ತಿದ್ದು ರಾತ್ರಿ ಹೇಮಂತ್ ಮತ್ತು ಹರೀಶ್ ಗುಂಪು ಮಾತನಾಡಬೇಕು ಎಂದು ಬಹದ್ದೂರ್‍ಪುರದ ಮೈದಾನಕ್ಕೆ ಲೋಕನಾಥ್‍ನನ್ನು ಕರೆದುಕೊಂಡು ಹೋಗಿದ್ದರು ಮೃತ ಲೋಕನಾಥ್ ಜೊತೆ ಇಬ್ಬರು ಸ್ನೇಹಿತರು ಹೋಗಿದ್ದು, ಈ ವೇಳೆ ಎರಡು ಗುಂಪುಗಳ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಲೋಕನಾಥ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ.

       ಹಲ್ಲೆಯಿಂದ ಹೆದರಿದ ಲೋಕನಾಥ್ ಜೊತೆಗಿದ್ದ ಇಬ್ಬರು ಸ್ನೇಹಿತರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ .ಲೋಕನಾಥ್ ಕೂಡ ತಪ್ಪಿಸಿಕೊಂಡು ಪಕ್ಕದಲ್ಲಿದ್ದ ಮನೆಗೆ ನುಗ್ಗಿದರೂ ಬೆನ್ನಟ್ಟಿ ಬಾಗಿಲು ಮುರಿದು ಮನೆಯೊಳಗೆ ನುಗ್ಗಿ ಕೊಚ್ಚಿ ಕೊಲೆ ಮಾಡಿದ್ದಾರೆ.ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಆನೇಕಲ್ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link