ಯೋಗಿ ಆಧಿತ್ಯನಾಥ್ ಮೇಲೆ ನಿಮಗ್ಯಾಕೆ ಅನುಕಂಪ : ಆಯೋಗಕ್ಕೆ ಮಾಯಾವತಿ ಪ್ರಶ್ನೆ

ಲಕ್ನೋ:

       ಯೋಗಿ ಆದಿತ್ಯನಾಥ್ ಮತ್ತು ಮಾಯಾವತಿಯವರ ಮೇಲೆ ಚುನಾವಣಾ ಆಯೋಗ ವಿಧಿಸಿದ್ದ ನಿಷೇಧವನ್ನು ಯೋಗಿ ಆದಿತ್ಯನಾಥ್ ಉಲ್ಲಂಘಿಸಿದ್ದಾರೆ ಎಂದು ಮಾಯಾವತಿ ಆರೋಪಿಸಿದ್ದಾರೆ. ಆದರೆ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರರು ಮಾಯಾವತಿ ಆರೋಪವನ್ನು ತಳ್ಳಿಹಾಕಿದ್ದಾರೆ.

       ಮಾಯಾವತಿ ಅವರು ಸರಣಿ ಟ್ವೀಟ್‍ಗಳ ಮೂಲಕ ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದು. ಯೋಗಿ ಆದಿತ್ಯನಾಥ್ ಅವರು ದೇವಸ್ಥಾನಗಳನ್ನು ಭೇಟಿ ಮಾಡುತ್ತಿದ್ದಾರೆ. ದಲಿತರ ಮನೆಗಳಲ್ಲಿ ಆಹಾರವನ್ನು ಸೇವಿಸುವ ಮೂಲಕ ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಘಿಸಿದ್ದಾರೆ. ಮತದಾರರನ್ನು ಸೆಳೆಯಲು ಮಾಧ್ಯಮ ವೇದಿಕೆಯನ್ನಾಗಿಸಿಕೊಂಡಿದ್ದಾರೆ. ಚುನಾವಣಾ ಆಯೋಗವು ಅವರ ಮೇಲೆ ಯಾಕೆ ಇಷ್ಟು ಅನುಕಂಪ ತೋರುತ್ತಿದೆ ಎಂದು ಪ್ರಶ್ನಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link