ಬೆಂಗಳೂರು
ನಗದು ಚಿನ್ನಾಭರಣ ದೋಚಲು ಪ್ರತಿರೋಧ ತೋರಿದ ಯುವಕನ ಮೇಲೆ ಹಲ್ಲೆ ನಡೆಸಿ ಕಿವಿ ಕತ್ತರಿಸಿ ಪರಾರಿಯಾಗಿರುವ ದುರ್ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಗುಪಾಳ್ಯದಲ್ಲಿ ನಡೆದಿದೆ.
ಗಾಯಗೊಂಡಿರುವ ಭಾರತೀನಗರದ ಕದಿರೇನಪಾಲ್ಯದ ಯುವಕ ಚಕ್ರವರ್ತಿ ವಿನೋದ್ ಕುಮಾರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚಕ್ರವರ್ತಿ ಅವರು ಕೆಲಸ ಮುಗಿಸಿಕೊಂಡು ರಾತ್ರಿ ಬೈಕ್ನಲ್ಲಿ ಮನೆಗೆ ಹೋಗುತ್ತಿದ್ದಾಗ ಜೋಗುಪಾಳ್ಯದ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ನಗದು ಚಿನ್ನದ ಚೈನ್, ಉಂಗುರ ಕಿತ್ತುಕೊಂಡು, ಮೊಬೈಲ್ ಕೊಡುವಂತೆ ಒತ್ತಾಯ ಮಾಡಿದೆ.
ಮೊಬೈಲ್ ಕೊಡಲು ನಿರಾಕರಿಸಿದ್ದರಿಂದ ಸಿಟ್ಟಿಗೆದ್ದ ದುಷ್ಕರ್ಮಿಗಳು ಮುಖಕ್ಕೆ ಗುದ್ದಿ ಕಿವಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಘಟನೆಯಿಂದ ಕಿವಿ ಕಟ್ ಆಗಿ ಗಂಭೀರ ಗಾಯಗೊಂಡಿರುವ ವಿನೋದ್ಗೆ ಕಿವಿ ಕೇಳಿಸದಂತಾಗಿದೆ.ಈ ಸಂಬಂಧ ಹಲಸೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೊಬೈಲ್ ಸ್ಫೋಟಗೊಂಡು ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಚ್ಎಎಲ್ನಲ್ಲಿ ನಡೆದಿದೆ.
ಯುವಕನಿಗೆ ಗಾಯ
ಗಾಯಗೊಂಡ ಬಿಹಾರ ಮೂಲದ ಯುವಕನನ್ನು ಸ್ಥಳೀಯ ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮೊಬೈಲ್ ಚಾರ್ಜ್ ಹಾಕಿ ವಿಡಿಯೋ ಕಾಲ್ ಮಾಡುತ್ತಿದ್ದಾಗ ಸ್ಫೋಟಗೊಂಡು ಮುಖ ಮತ್ತು ಕೈಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಯುವಕನ ಎಡಗೈನ ಮೂರು ಬೆರಳುಗಳ ಸ್ವಾಧೀನ ತಪ್ಪಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಸದ್ಯಕ್ಕೆ ಯುವಕನ ಹೆಸರು ಹಾಗೂ ಯಾವ ಕಂಪನಿ ಮೊಬೈಲ್ ಎಂದು ತಿಳಿದುಬಂದಿಲ್ಲ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








