ಹುಬ್ಬಳ್ಳಿ
ಮೇ೨೩ರ ನಂತರ ಮೋದಿಗೆ “ಮಹಾನ್ ಫೇಕ್ ಮಹಾರಾಜ” ಅಂತಾ ಹೆಸರು ಬರಲಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಈಗ ವಿಜ್ಞಾನಿ ಆಗಿದ್ದಾರೆ. ಬಾಲಾಕೋಟ್ ದಾಳಿ ಸಂದರ್ಭದಲ್ಲಿ ಮೋದಿ ಮೋಡದ ವಿಜ್ಞಾನಿ ಆಗಿದ್ದರು. ಪ್ಲ್ಯಾಸ್ಟಿಕ್ ಸರ್ಜರಿ ವಿಜ್ಞಾನಿ ಕೂಡ ಆಗಿದ್ದಾರೆ. ಅವರ ಗ್ರಾಜ್ಯುವೆಟ್ ಫೇಕ್, ಅವರ ಕೊಟ್ಟ ಕಾರ್ಯಕ್ರಮಗಳು ಕೂಡ ಫೇಕ್ ಎಂದರು.
ಮೊದಲು ಪ್ರಧಾನ ಸೇವಕ ಅಂದ್ರು, ಆ ಬಳಿಕ ಚೌಕಿದಾರ ಅಂದ್ರು. ಆದರೆ ಮೇ ೨೩ರ ಬಳಿಕ ಅವರಿಗೆ ಬೇರೆಯದೇ ಹೆಸರೇ ಬರಲಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಮುಖಂಡರು ಇರುವ ಹೋಟೆಲ್‌ಗಳ ಮೇಲೆ ದಾಳಿ ವಿಚಾರವಾಗಿ ಮಾತನಾಡಿದ ಅವರು, ಐಟಿ, ಸಿಬಿಐದಂತಹ ಪಕ್ಷಗಳ ಸಮ್ಮಿಶ್ರ ಸರ್ಕಾರವೇ ಎನ್.ಡಿ.ಎ. ಆಗಿ ಹೋಗಿದೆ. ಐಟಿ ಮತ್ತು ಇಡಿಯನ್ನು ರಾಜಕೀಯ ದಾಳಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಐಟಿ ಮತ್ತು ಇಡಿಯನ್ನು ಕೇಂದ್ರ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು. ಜನರನ್ನು ಭಯ ಬೀಳಿಸುವುದಕ್ಕಾಗಿ ದಾಳಿ ನಡೆಸಲಾಗುತ್ತದೆ ಎಂದರು. ಹುಬ್ಬಳ್ಳಿ ಹೋಟೆಲ್ ದಾಳಿಯಲ್ಲಿ ಶಿವಳ್ಳಿ ಮೋಡ ಸಿಕ್ಕಿರುವ ವಿಚಾರ ಕುರಿತು ಮಾತನಾಡಿ, ಅದಾವುದು ನಮ್ಮದಲ್ಲ. ಅವರೇ ಇಟ್ಟು ಹಾಗೇ ಮಾಡಿಸಿರಬಹುದು ಎಂದು ಅವರು ಆರೋಪ ಹೇರಿದರು. ಸರ್ಕಾರದ ಭವಿಷ್ಯ ರಾಹುಲ್ ಗಾಂಧಿ ಮತ್ತು ದೇವೆಗೌಡರ ನಿರ್ಣಯದ ಮೇಲಿದೆ.ಅವರನ್ನು ಬಿಟ್ಟು ಉಳಿದವರೆಲ್ಲರ ಮಾತುಗಳು ಕೇವಲ ರಾಜಕೀಯ ಪ್ರೇರಿತ ಹೇಳಿಕೆಗಳು ಮಾತ್ರ.ರಮೇಶ ಜಾರಕಿಹೊಳಿ ಇನ್ನು ಸಹ ಪಕ್ಷದಲ್ಲಿ ಇದ್ದಾರೆ.ಅವರು ನಮ್ಮ ಪಕ್ಷದಲ್ಲೇ ಇರ್ತಾರೆ ಬೇರೆ ಎಲ್ಲಿಯೂ ಹೋಗಿಲ್ಲ .ರಮೇಶ ಜಾರಕಿಹೊಳಿ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದು ಅವರು ಈ ಕುರಿತು ಹೇಳಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








