ಹೊಸದಿಲ್ಲಿ :
ಭಾರತ ಚೀನಾ ಗಡಿಯ ಅತ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಚೀನ ವಾಯು ಸೇನಾ ಸಾಮರ್ಥ್ಯವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುತ್ತಿದೆ.
ಚೀನಾದ ಅತ್ಯಂತ ಅಪಾಯಕಾರಿ ಎನಿಸಿರುವ ಡೈವಿಂಗ್ ಈಗಲ್ ಮತ್ತು ಎಚ್-6ಕೆ ಬಾಂಬರ್ಗಳನ್ನು ಭಾರತದ ಗಡಿಗೆ ನಿಕಟವೇ ಇರುವ ತನ್ನ ಎರಡು ವಾಯು ನೆಲೆಗಳಲ್ಲಿ ತಂದು ನಿಲ್ಲಿಸಿವೆ.
ಸದ್ಯ ದೊರಕಿರುವ ಮಾಹಿತಿ ಪ್ರಕಾರ ಚೀನದ ಪೀಪಲ್ ಲಿಬರೇಶನ್ ಆರ್ಮಿ ಏರ್ ಫೋರ್ಸ್ (ಪಿಎಲ್ಎಎಎಫ್), ಅತ್ಯಂತ ಡೆಡ್ಲಿ ವಾಯು ದಾಳಿ ಸಂಘಟಿಸುವ ಡೈವಿಂಗ್ ಈಗಲ್ ಜೆಟ್ ಯುಎವಿ ಗಳನ್ನು ನಿರ್ವಹಿಸುತ್ತಿದೆ.
ಇವುಗಳನ್ನು ಮಲಾನ್ ಏರ್ಬೇಸ್ನಲ್ಲಿ ನಿಯೋಜಿಸಲಾಗಿದೆ. ಇದೇ ರೀತಿ ಹೋಪಿಂಗ್ ವಾಯು ನೆಲೆಯಲ್ಲಿ ಎಚ್-6ಕೆ ಬಾಂಬರ್ಗಳನ್ನು ಸ್ಥಾಪಿಸಲಾಗಿದೆ.ಡೈವಿಂಗ್ ಈಗಲ್ ಯುಎವಿ ಗಳು ವಿಶ್ವದ ಅತೀ ದೊಡ್ಡ ಮಾನವ ರಹಿತ ದಾಳಿ ವಿಮಾನಗಳಾಗಿವೆ. ಇದು 15 ಮೀಟರ್ ಉದ್ದವಿದ್ದು ಇದರ ರೆಕ್ಕೆಗಳ ಅಗಲ 35ರಿಂದ 45 ಮೀಟರ್ ಇದೆ.
ಡೈವಿಂಗ್ ಈಗಲ್ ಜೆಟ್ ಯುಎವಿ ಗಳು ನಿಗೂಢವಾಗಿ ಬರುವ ಅಮೆರಿಕದ ಎಫ್ 22 ಮತ್ತು ಎಫ್ 35 ಫೈಟರ್ ಜೆಟ್ಗಳನ್ನು ಸುಲಭದಲ್ಲಿ ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿವೆ ಎಂದು ಚೀನ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








