ಮಧುಗಿರಿ :
ವಿಶ್ವವಾಣಿ ಕನ್ನಡ ದಿನ ಪತ್ರಿಕೆ ಸಂಪಾದಕರಾದ ವಿಶ್ವೇಶ್ವರ ಭಟ್ ವಿರುದ್ಧ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಜೆಡಿಎಸ್ ಮುಖಂಡರು ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆ ಒತ್ತಾಯಿಸಿ ಮಧುಗಿರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ಶಿವದಾಸ್ ರವರ ನೇತೃತ್ವದಲ್ಲಿ ಉಪವಿಭಾಗಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಾಕ ಮಹೇಶ್ ರವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಎನ್ ಶಿವದಾಸ್ ಮಾತನಾಡಿ ಪರ್ತಕರ್ತರ ಮೇಲೆ ಪೊಲೀಸ್‍ಠಾಣೆಯಲ್ಲಿ ದೂರು ದಾಖಲಿಸಿರುವುದು ಪತ್ರಿಕಾ ಧರ್ಮಕ್ಕೆ ವಿರುದ್ಧವಾದ್ದು ಹಾಗೂ ಪತ್ರಿಕಾ ಸ್ವತಂತ್ರ್ಯಕ್ಕೆ ಮೇಲೆ ಸವಾರಿ ಮಾಡುವಂತಹದಾಗಿದ್ದು ಹಾಗೂ ಸರಿಯಾದ ಕ್ರಮವು ಅಲ್ಲಾ ಮತ್ತು ಖಂಡನೀಯ. ಸರಕಾರ ಹಾಗೂ ಪತ್ರಕರ್ತರ ನಡುವೆ ಸೌಹಾರ್ದ ವಾತವರಣ ವಿರಬೇಕು ಪ್ರಕರಣವನ್ನು ವಾಪಸ್ಸು ಪಡೆಯಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಉಪಾಧ್ಯಕ್ಷ ಕಂಬಣ್ಣ. ಪದಾಧಿಕಾರಿಗಳಾದ ದೊಡ್ಡೇರಿ ಕಣಿಮಯ್ಯ. ಭಾಸ್ಕರ್, ಗಂಗಾಧರ್, ಚಿರಂಜೀವಿ. ಆರ್.ಮಂಜುನಾಥ್. ಫಣೀಂದ್ರ, ಕಂಠಿ ಮಂಜುನಾಥ್. ಎಂ.ಎಸ್.ಬಿ.ಆರ್.ಪಿ. ಕುಮಾರ್. ಮಹರಾಜು, ಮೊದಲೇಟಪ್ಪ, ಶೇಷಾನಾಯಕ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








