ಉಡುಪಿ:
ಹಿಂದೆ ಸಿಎಂ ವಾಸ್ತವ್ಯ ಮಾಡಿದ ಗ್ರಾಮಗಳ ಸ್ಥಿತಿ ಏನಾಗಿದೆ? ಗ್ರಾಮ ವಾಸ್ತವ್ಯದಿಂದ ಅಭಿವೃದ್ಧಿ ಆಗಲ್ಲ. ಜನ ನಿಮಗೆ ಅಧಿಕಾರ ಕೊಟ್ಟಿರೋದು ಕೇವಲ ಗ್ರಾಮ ವಾಸ್ತವ್ಯ ಮಾಡೋಕಲ್ಲ. ವಿಧಾನಸೌಧದಲ್ಲಿ ಕೂತ್ಕೊಂಡು ಕೆಲಸ ಮಾಡೋಕೆ ಅಧಿಕಾರ ಕೊಟ್ಟಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಗಿ ಮಾತನಾಡಿದರು .
ಉಡುಪಿಯಲ್ಲಿಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ಒಂದು ದಿನ ಕುಳಿತುಕೊಳ್ಳಲ್ಲ. ಹೋಟೆಲ್ ವೆಸ್ಟ್ ಎಂಡ್ನಿಂದಲೇ ಆಡಳಿತ ನಡೆಸುತ್ತಾರೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಹೋಟೆಲ್ ರೂಂನಿಂದ ಆಡಳಿತ ನಡೆಯುತ್ತಿದೆ. ವ್ಯವಹಾರಕ್ಕೆ ಬರುವವರಿಗೆ ಅನಾನುಕೂಲ, ಜನರಿಗೆ ಭೇಟಿ ಮಾಡಲು ಕಷ್ಟವಾಗಿದೆ. ವಿಧಾನಸೌಧದಲ್ಲಿ ವಾಸ್ತುವೇ ಇಲ್ಲ ಅನಿಸಿಬಿಟ್ಟಿದೆಯಾ? ಯಾಕೆ ವೆಸ್ಟ್ ಎಂಡ್ನಲ್ಲಿ ಕೂತಿದ್ದೀರಿ. ಮೂರನೇ ಮಾಳಿಗೆ ಇರೊದೇ ಸಿಎಂ ಕುಳಿತುಕೊಳ್ಳೋಕೆ ಅಂತಾ ಗೊತ್ತಿಲ್ವಾ ಎಂದು ಪ್ರಶ್ನಿಸಿದರು.
ಮತ್ತು ನಾನು ಸಚಿವ ಸ್ಥಾನದ ಆಕಾಂಕ್ಷಿಯೇ ಅಲ್ಲ. ಸಂಸದರ ಪೈಕಿ ನಾನು ತುಂಬಾ ಜೂನಿಯರ್. ರಾಜ್ಯದ ಸಂಸದರ ಪೈಕಿಯೂ ನಾನು ಜೂನಿಯರ್. ದೇಶದಲ್ಲಿ, ರಾಜ್ಯದಲ್ಲಿ ಹಲವಾರು ಹಿರಿಯ ಸಂಸದರು ಆಯ್ಕೆಯಾಗಿದ್ದಾರೆ. ನಾನು ಸಚಿವ ಸ್ಥಾನವನ್ನು ಅಪೇಕ್ಷಿಸಲೇ ಇಲ್ಲ. ಮೋದಿ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ಎಂದಿದ್ದ ರೇವಣ್ಣ ಈಗ ಸನ್ಯಾಸ ಸ್ವೀಕಾರಕ್ಕೆ ಗುರುಗಳನ್ನು ಹುಡುಕುತ್ತಿರಬಹುದು. ಅವರ ಕುಟುಂಬದವರು ಹೆಚ್ಚು ಜನ ರಾಜಕೀಯ ಸನ್ಯಾಸ ಪಡೆದರೆ ರಾಜ್ಯಕ್ಕೆ ಒಳ್ಳೆಯದು ಎಂದು ಶೋಭಾ ಕಿಡಿಕಾರಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








