ಬೆಂಗಳೂರು
ನನಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,ಯಡಿಯೂರಪ್ಪ ನನಗೆ ಹತ್ತಿರದ ಪರಿಚಯವಿದ್ದು ಅವರ ಪ್ರಭಾವ ಬಳಸಿ ವಿಧಾನಸೌಧದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 30 ಲಕ್ಷರೂಗಳನ್ನು ವಂಚಿಸಿ ಪರಾರಿಯಾಗಿರುವ ಐನಾತಿ ವಂಚಕನಿಗಾಗಿ ಯಶವಂತಪುರ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ
ಕುಣಿಗಲ್ ಮೂಲದ ಚಂದ್ರಶೇಖರ್ ಎಂಬಾತ ಸಿದ್ದರಾಮಯ್ಯ ಹಾಗೂ ಬಿ.ಎಸ್.ಯಡಿಯೂರಪ್ಪ ಗೊತ್ತು ಎಂದು ಹೇಳಿ ವಿಧಾನಸೌಧದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಶಿವಣ್ಣ ಹಾಗೂ ಹನುಮಂತಪ್ಪ ಎಂಬುವರನ್ನು ನಂಬಿಸಿ ಇಬ್ಬರಿಂದ ಒಟ್ಟು 30 ಲಕ್ಷ ರೂಗಳನ್ನು ಪಡೆದು ಪರಾರಿಯಾಗಿದ್ದಾನೆ.
ಆದರೆ ಚಂದ್ರಶೇಖರ್ ಮಾತನ್ನು ನಂಬಿದ ಶಿವಣ್ಣ ಮತ್ತು ಹನುಮಂತಪ್ಪ ಇದೀಗ ಮೂರು ನಾಮ ಹಾಕಿಸಿಕೊಂಡಿದ್ದಾರೆ.
ವಂಚಕ ಚಂದ್ರಶೇಖರ್ ಕಳೆದ 6 ತಿಂಗಳ ಹಿಂದೆ ಹೊಟೇಲೊಂದರಲ್ಲಿ ಶಿವಣ್ಣ ಹಾಗೂ ಹನುಮಂತಪ್ಪನಿಗೆ ಪರಿಚಯನಾಗಿದ್ದು ನಾನು ಅಮೃತಾನಂದಮಯಿ ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದೇನೆ. ನಮ್ಮ ಆಶ್ರಮಕ್ಕೆ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಬರುತ್ತಿರುತ್ತಾರೆ. ಅವರು ನನಗೆ ತುಂಬಾ ಪರಿಚಯಸ್ಥರು ಏನೇ ಕೆಲಸ ಬೇಕಿದ್ದರೂ ಮಾಡಿಸಿಕೊಡುತ್ತೇನೆ ಎಂದು ಪುಸಲಾಯಿಸಿದ್ದಾನೆ.
ಇವನ ಮಾತನ್ನು ನಂಬಿ ಇಬ್ಬರೂ 30 ಲಕ್ಷ ಕಳೆದುಕೊಂಡಿದ್ದಾರೆ.ವಂಚಕ ಚಂದ್ರಶೇಖರ್ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ವಂಚಕನಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








