ಬೆಂಗಳೂರು
ಮನೆಕಳವು, ವಾಹನ ಕಳವು ಸೇರಿ 106 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 40 ಮಂದಿ ಆರೋಪಿಗಳನ್ನು ಬಂಧಿಸಿ ಭರ್ಜರಿ ಬೇಟೆಯಾಡಿರುವ ದಕ್ಷಿಣ ವಿಭಾಗದ ಪೊಲೀಸರು, ಒಂದು ಕೋಟಿ, 57 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸುಬ್ರಮಣ್ಯಪುರದಲ್ಲಿ 28 ಪ್ರಕರಣಗಳನ್ನು ಪತ್ತೆಹಚ್ಚಿ 13 ಮಂದಿಯನ್ನು ಬಂಧಿಸಿ, 365 ಗ್ರಾಂ ಚಿನ್ನಾ ಕಾರು ಸೇರಿ21 ಲಕ್ಷ 61 ಸಾವಿರ ರೂ. ಮೌಲ್ಯದ ವಸ್ತುಗಳನ್ನು, ಕೆ.ಎಸ್. ಲೇಔಟ್ನಲ್ಲಿ 52 ಪ್ರಕರಣಗಳನ್ನು ಭೇದಿಸಿ, 14 ಮಂದಿಯನ್ನು ಬಂಧಿಸಿ, 1 ಕೆಜಿ ಬೆಳ್ಳಿ, 775 ಗ್ರಾಂ ಚಿನ್ನ, 30 ಬೈಕ್ಗಳು, 23 ಆಟೋಗಳು, ಒಂದು ಕಾರು ಸೇರಿ, 8 ಕೋಟಿ, 92 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿ ದ್ದಾರೆ
ಕೋಣನಕುಂಟೆ ಪೊಲೀಸರು, 23 ಪ್ರಕರಣಗಳನ್ನು ಪತ್ತೆಹಚ್ಚಿ 11 ಮಂದಿ ಆರೋಪಿಗಳನ್ನು ಬಂಧಿಸಿ, 509 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, 14 ದ್ವಿಚಕ್ರ ವಾಹನ, 2 ಕಾರುಗಳು ಸೇರಿ 25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಸಿಪಿ ಡಾ. ರೋಹಿಣಿ ಕಟೋಚ್ ಅವರು ತಿಳಿಸಿದ್ದಾರೆ.
ಪುಟ್ಟೇನಹಳ್ಳಿ ಪೊಲೀಸರು, 3 ಪ್ರಕರಣಗಳನ್ನು ಭೇದಿಸಿ, ಇಬ್ಬರನ್ನು ಬಂಧಿಸಿ, 260 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ ಸೇರಿ, 8.55 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ
ಆರೋಪಿಗಳ ಸೆರೆ
ಕುಮಾರಸ್ವಾಮಿ ಲೇಔಟ್ ಪೊಲೀಸರು, ಮೊಬೈಲ್ನಲ್ಲಿ ಲಿಡೋ ಗೇಮ್ ಆಡುವಾಗ ಉಂಟಾದ ಜಗಳದಲ್ಲಿ ಶೇಕ್ ಮಿಲನ್ ಎಂಬಾತನನ್ನು ಕೊಲೆಗೈದ ಶೋಯಿಬ್ (23) ಹಾಗೂ ಸೈಯದ್ ಮುನೀರ್ (25)ನನ್ನು ಬಂಧಿಸಿದ್ದಾರೆ.
ಲಿಡೋ ಗೇಮ್ ಆಡುವ ವೇಳೆ ಉಂಟಾದ ಜಗಳದಲ್ಲಿ ಆಕ್ರೋಶಗೊಂಡ ಆರೋಪಿಗಳು, ಸ್ನೇಹಿತನನ್ನೇ ಚಾಕುವಿನಿಂದ ಚುಚ್ಚಿ ಕೊಲೆಮಾಡಿ ಪರಾರಿಯಾಗಿದ್ದರು. ಕೃತ್ಯ ನಡೆದ ಕೇವಲ 48 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಸುಬ್ರಮಣ್ಯಪುರ ಪೊಲೀಸರು, ಮದ್ಯಪಾನ ಮಾಡಿ ಪಾರ್ಟಿ ಮಾಡುವ ವೇಳೆ ಭಾಗ್ಯಮ್ಮ ಎಂಬಾಕೆಯನ್ನು ಚಾಕುವಿನಿಂದ ಚುಚ್ಚಿ ಕೊಲೆಮಾಡಿ ಪರಾರಿಯಾಗಿದ್ದ ಆರೋಪಿ ಭಾಸ್ಕರ್ (24) ಎಂಬಾತನನ್ನು ಬಂಧಿಸಿದ್ದಾರೆ.
ವೇಶ್ಯಾವಾಟಿಕೆ
ಮಾರುತಿನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿ ನಾಲ್ವರು ಮಹಿಳೆಯರನ್ನು ರಕ್ಷಿಸಿ, ಸುಧಾ ಹಾಗೂ ಪುನೀತ್ನನ್ನು ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಕೋಣನಕುಂಟೆ ಪೊಲೀಸರು, ಹಳೆದ್ವೇಷದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ರಾಮ್ಕುಮಾರ್ ಎಂಬಾತನನ್ನು ಕೊಲೆಮಾಡಿದ್ದ ನಾಲ್ವರನ್ನು ಬಂಧಿಸಿದ್ದಾರೆ.ಸುರೇಶ್ ಅಲಿಯಾಸ್ ಸೂರಿ (44), ರವಿ ಅಲಿಯಾಸ್ ಕಬಾಬ್ (29), ಮಹೇಶ್ (29), ಗಿರೀಶ್ ಅಲಿಯಾಸ್ ಗಿರಿ (32) ಬಂಧಿತ ಆರೋಪಿಗಳಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








