ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದವರನ್ನು ಬಂಧಿಸಲು ಆಗ್ರಹ

ಚಿಕ್ಕನಾಯಕನಹಳ್ಳಿ

      ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಶ್ಯಾನಾಡ್ರೆಹಳ್ಳಿಯ ಪ್ರತಾಪ ಎನ್ನುವ ವಿದ್ಯಾರ್ಥಿಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಸವರ್ಣಿಯರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ಬೇವಿನಹಳ್ಳಿ ಚನ್ನಬಸವಯ್ಯ ಆಗ್ರಹಿಸಿದರು.

     ವಿದ್ಯಾರ್ಥಿ ಪ್ರತಾಪ, ರಾತ್ರಿ ದೇವಸ್ಥಾನಕ್ಕೆ ಪ್ರವೇಶ ಮಾಡಿದ್ದಾನೆ ಎಂಬ ಒಂದೇ ಕಾರಣದಿಂದ ವಿವಸ್ತ್ರಗೊಳಿಸಿ ಬೆತ್ತಲೆ ಮಾಡಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವುದನ್ನು ಮಾದಿಗ ದಂಡೋರ ಸಮಿತಿ ಖಂಡಿಸುತ್ತದೆ ಹಾಗೂ ಈ ಕೃತ್ಯಕ್ಕೆ ಕಾರಣರಾದ ವ್ಯಕ್ತಗಳ ಮೇಲೆ ಪಿ.ಸಿ.ಆರ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ನ್ಯಾಯ ದೊರಕಿಸಿ ಕೊಡುವಂತೆ ಹಾಗೂ ಪ್ರತಾಪನಿಗೆ ಪರಿಹಾರ ನೀಡುವಂತೆ ಆಗ್ರಹಿಸಿದರು.
ಪಟ್ಟಣದ ನೆಹರು ವೃತ್ತದಿಂದ ಹೊರಟ ಮೆರವಣಿಗೆ ಬಿ.ಹೆಚ್.ರಸ್ತೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ತೇಜಸ್ವಿನಿರವರಿಗೆ ಮನವಿ ಸಲ್ಲಿಸಿತು.

     ಈ ಸಂದರ್ಭದಲ್ಲಿ ಮುಖಂಡರಾದ ಗೋವಿಂದರಾಜು, ಕೆ.ಆರ್.ರಂಗಸ್ವಾಮಿ, ಗೋ.ನಿ.ವಸಂತ್‍ಕುಮಾರ್, ಮಂಜುಳಮ್ಮ, ಜಯರಾಂ, ಬಿಳಿಗೆಹಳ್ಳಿರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link