ದೂಡಾ ಅಧಿಕಾರಿಗಳಿಂದ ಅಕ್ರಮ ನಿವೇಶನ ಹಂಚಿಕೆ

ದಾವಣಗೆರೆ:


ದೂಡಾದಿಂದ ಕಳೆದ 2011ರಲ್ಲಿ ಹಂಚಲಾಗಿದ್ದ 200 ನಿವೇಶನಗಳಲ್ಲಿ 103 ನಿವೇಶನಗಳನ್ನು ಅಕ್ರಮವಾಗಿ, ಭ್ರಷ್ಟಾಚಾರ ಮಾಡುವ ಮೂಲಕ ಹಂಚಿಕೆ ಮಾಡಲಾಗಿದೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2011ರಲ್ಲಿ ದಾವಣಗೆರೆಯ ಜೆ ಎಚ್ ಪಟೇಲ್ ಬಡಾವಣೆಯಲ್ಲಿ ಅಕ್ರಮ ನಡೆದಿತ್ತು ಆಗ ಶ್ರೀರಾಮ ಸೇನೆ ವತಿಯಿಂದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಅದರಂತೆ ಈಗಾಗಲೇ ಅರುವತ್ತು ಮಂದಿ ಜನಪ್ರತಿನಿಧಿಗಳು ತಮ್ಮ ನಿವೇಶನಗಳನ್ನು ವಾಪಾಸು ಮಾಡಿದ್ದು ಇನ್ನುಳಿದವರು ವಿರುದ್ಧವೂ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ ಇದೇ 7ರಂದು ಮತ್ತೊಂದು ಮುದ್ದತ್ತು ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸರ್ಕಾರದ ಮಾರ್ಗಸೂಚಿ ಪ್ರಕಾರ ಬಡವರಿಗೆ, ನಿವೇಶನ ರಹಿತರಿಗೆ, ಮನೆ ಇಲ್ಲದವರಿಗೆ ಹಂಚಬೇಕಾದ 103 ನಿವೇಶನಗಳನ್ನು ಉಳ್ಳವರಿಗೆ ಹಂಚಿಕೆ ಮಾಡಲಾಗಿತ್ತು ಈ ನಿಟ್ಟಿನಲ್ಲಿ ಶ್ರೀರಾಮಸೇನೆ ಕೋರ್ಟ್ ಮೆಟ್ಟಿಲೇರಿತ್ತು ಈ ಎಲ್ಲಾ 103 ಜನರ ಮೇಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಆಗಲಿದ್ದು ಕನಿಷ್ಠ 7ವರ್ಷ ಸೆರೆ ವಾಸ ಮತ್ತು ದಂಡ ವಿಧಿಸಲಿದೆ ಎಂದು ಹೇಳಿದರು.
ಸಮಾಜದಲ್ಲಿ ಗಣ್ಯ ವ್ಯಕ್ತಿಗಳಾಗಿದ್ದು, ಜನಪ್ರತಿಧಿಗಳು ಆಗಿದ್ದರೂ ಸಹ ಅವರ ಸಂಬಂಧಿಕರ ಹೆಸರಿನಲ್ಲಿ ನಿವೇಶನ ಮತ್ತು ಮನೆಗಳನ್ನು ನಿರ್ಮಿಸಲಾಗಿದೆ. ಇಂಥವರಿಗೆ ನ್ಯಾಯಾಲಯ ಶೀಘ್ರವೇ ಶಿಕ್ಷೆ ನೀಡಬೇಕು. ಈ ರೀತಿಯಾದರೆ ಮುಂದೆ ಭ್ರಷ್ಟಾಚಾರ ಮಾಡುವವರಿಗೆ ಕುಮ್ಮಕ್ಕು ನೀಡಿದಂತಾಗುತ್ತದೆ. ಕಾರಣ ನ್ಯಾಯಾಲಯ ಆದಷ್ಟು ಶೀಘ್ರ ತೀರ್ಪು ನೀಡಬೇಕೆಂದು ಮನವಿ ಮಾಡಿದರು.

ಒಂದು ವೇಳೆ ಕೋರ್ಟ್ ವಿಳಂಬ ಮಾಡಿದರೆ ಭ್ರಷ್ಟಾಚಾರಕ್ಕೆ ಕುಮ್ಮುಕ್ಕು ಸಿಕ್ಕಂತಾಗುತ್ತದೆ ಅಲ್ಲದೆ ಪ್ರಾಮಾಣಿಕರಿಗೆ ನಿರಾಶ್ರಿತರ ರೈತರಿಗೆ ನಿವೇಶನಗಳು ದೊರೆಯದಂತಾಗುತ್ತದೆ .ರಾಜ್ಯದಲ್ಲಿ ಆಡಳಿತ ನಡೆಸುವ ಬಿಜೆಪಿ ಜನಪ್ರತಿಗಳು ಸಹ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎನ್ನುವುದಕ್ಕೆ ಇದಕ್ಕೆ ಇದೇ ಮೂಲ ಉದಾಹರಣೆ. ಅಂದು ಕಾಂಗ್ರೆಸ್ ನಲ್ಲಿ ಇದ್ದು ನಿವೇಶನ ಪಡೆದ ವ್ಯಕ್ತಿಯೇ ಇಂದು ದೂರದ ಅಧ್ಯಕ್ಷರಾಗಿದ್ದಾರೆ. ಎಲ್ಲದಕ್ಕೂ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2017ರಲ್ಲು ಸಹ ಕಾಂಗ್ರೆಸ್ ಆಡಳಿತವಿದ್ದು ಅಂದಿನ ಸಮಿತಿಯಲ್ಲಿ ತೀರ್ಮಾನಿಸಿದಂತೆ ಇಪ್ಪತ್ತು ಸಾವಿರ ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿತ್ತು ಕೇವಲ ಅರ್ಜಿ ಶುಲ್ಕವೇ 4.5 ಕೋಟಿ ಆಗಿದೆ. ಈ ಹಣ ಎಲ್ಲಿ ಹೋಯಿತು. ಈ ರೀತಿ ಬಂದ ಕೋಟಿಗಟ್ಟಲೆ ಹಣವನ್ನು ದೂಡಾ ದ ಅಧಿಕಾರಿಗಳು ಜನಪ್ರತಿನಿಧಿಗಳು ಲೂಟಿ ಹೊಡೆಯುತ್ತಿದ್ದಾರೆ. ಈ ಬಗ್ಗೆ ಶೀಘ್ರವೇ ಅವರು ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾ ಖಾವುಂಗಾ ನ ಖಾನೆ ದೂಂಗಾ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಆದರೆ ಇಲ್ಲಿಯ ಬಿಜೆಪಿ ಮುಖಂಡರು ಅವರ ಮಾನ ಕಳೆಯುವಂಥ ಕೆಲಸಮಾಡುತ್ತಿದ್ದಾರೆ. ಅಧಿಕಾರದ ದಾಹಕ್ಕಾಗಿ ವಿಚಿತ್ರ ವ್ಯವಸ್ಥೆ ತಂದಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಕಳ್ಳನಿಗೆ ಖದೀಮನಿಗೆ ದರೋಡೆಕಾರರಿಗೆ ಖಜಾನೆಯ ಬೀಗ ನೀಡಿದಂತಾಗಿದೆ. ಒಟ್ಟಿನಲ್ಲಿ ಎಲ್ಲರೂ ಲೂಟಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದಲ್ಲದೆ ಅಕ್ರಮವಾಗಿ ನಿವೇಶನಗಳನ್ನು ಪಡೆದಿರುವ ಹಾಲಿ ದೂಡಾ ಅಧ್ಯಕ್ಷ ದೇವರಮನಿ ಅವರು ಮಾನ ಮರ್ಯಾದೆ ಇದ್ದರೆ ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ಪಡೆಯಬೇಕು ಇಲ್ಲ ಜಿಲ್ಲಾ ಉಸ್ತುವಾರಿ ಸಚಿವರು 10 ದಿನದಲ್ಲಿ ರಾಜಿನಾಮೆ ಪಡೆಯಬೇಕು ಒಂದು ವೇಳೆ ಹಾಗಾಗದಿದ್ದರೆ ದೂಡಾದ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು .

ಇದಲ್ಲದೇ 2017ರಲ್ಲೂ ಹಂಚಿಕೆಯಾದ ನಿವೇಶನಗಳಲ್ಲಿ ಭ್ರಷ್ಟಾಚಾರ ನಡೆದಿದ್ದು ಈ ಕುರಿತಂತೆ ಕೋರ್ಟ್ ಗೆ ದಾಖಲು ದಾಖಲೆಗಳನ್ನು ನೀಡಲಾಗುತ್ತಿದೆ ಇನ್ನು ಹತ್ತು ದಿನದಲ್ಲಿ ಬೆಂಗಳೂರಿನ ಜನ ಪ್ರತಿ ನ್ಯಾಯಾಲಯದಲ್ಲಿ ಪ್ರಕರಣ ಹೂಡಲಾಗುವುದು ಎಂದು ಹೇಳಿದರು .
ಇದಲ್ಲದೆ ನ್ಯಾಯಾಲಯವು ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವವರೆಗೂ ಮುಂದಿನ ಬಡಾವಣೆಗಳನ್ನು ನಿರ್ಮಾಣ ನಿರ್ಮಾಣ ಮಾಡದಂತೆ ಪ್ರಕ್ರಿಯೆಗಳಿಗೆ ಕೈಹಾಕದಂತೆ ತಡೆಯಾಜ್ಞೆ ನೀಡಬೇಕೆಂದು ಮನವಿ ಮಾಡಿದರು ಅಲ್ಲದೆ ಇದಕ್ಕೆ ಅರ್ಜಿ ಕೂಡ ಸಲ್ಲಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಉಪಾಧ್ಯಕ್ಷ ಆಲೂರು ರಾಜಶೇಖರ್, ಸಾಗರ್ ಕರಾಟೆ, ರಮೇಶ್, ಶ್ರೀಧರ್, ಶ್ರೀನಿವಾಸ್ ವಾಲಿ, ವಿನೋದ್, ರಾಹುಲ್, ರಾಜು ವಿನೋದ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link