ಹಾನಗಲ್ಲ :
ಹಾನಗಲ್ಲ ನ್ಯಾಯಾಲಯದ ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನ್ಯಾಯವಾದಿಗಳಾದ ಸೋಮಶೇಖರ ಕೋತಂಬರಿ ಹಾಗೂ ಎಸ್.ಎಲ್.ಬಣಕಾರ ನಾಮಪತ್ರ ಸಲ್ಲಿಸಿದ್ದಾರೆ.
ಸೆಪ್ಟಂಬರ 29 ರಂದು ನಡೆಯುವ ವಕೀಲರ ಸಂಘದ ಚುನಾವಣೆಗೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಹಕಾರ್ಯದರ್ಶಿ ಹಾಗೂ ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಸೆ. 22 ಕೊನೆಯ ದಿನ. ಈ ವರೆಗೆ ಅಧ್ಯಕ್ಷ ಸ್ಥಾನಕ್ಕೆ ನ್ಯಾಯವಾದಿಗಳಾದ ಸೋಮಶೇಖರ ಕೋತಂಬರಿ ಹಾಗೂ ಎಸ್.ಎಲ್.ಬಣಕಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನ್ಯಾಯವಾದಿ ಎಸ್.ಟಿ.ಕಾಮನಹಳ್ಳಿ ನಾಮಪತ್ರ ಸಲ್ಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
