ನಾಳೆ ದಂಡಿನ ಮಾರಮ್ಮ ದೇವಿಯ ಬೆಳ್ಳಿ ಪಲ್ಲಕ್ಕಿ ಉತ್ಸವ…!

ಮಧುಗಿರಿ :

    ಮಾ.11 ರಿಂದ ಪ್ರಾರಂಭವಾಗಿರುವ ಇತಿಹಾಸ ಪ್ರಸಿದ್ಧ ದಂಡಿನ ಮಾರಮ್ಮನ ಜಾತ್ರೆ ಯಲ್ಲಿ ವಿಶೇಷವಾಗಿ ಜನರನ್ನು ಆಕರ್ಷಿಸುವ ಬೆಳ್ಳಿ ಪಲ್ಲಕ್ಕಿಗೆ ಬರೋಬ್ಬರಿ 60 ವರ್ಷಗಳು ಕಳೆಯುತ್ತಿವೆ.ಪ್ರತಿ ವರ್ಷ ಯುಗಾದಿ ಹಬ್ಬಕ್ಕೂ ಮುನ್ನಾ ಹಾಗೂ ಪಾಲ್ಗುಣ ಮಾಸದಲ್ಲಿ ಆರಂಭವಾಗುವ ಜಾತ್ರ ಮಹೋತ್ಸವು 11 ದಿನಗಳ ಕಾಲ ನಡೆಯುವ ಬೃಹತ್ ಜಾತ್ರ ಮಹೋತ್ಸವ ವಾಗಿದೆ.

   ಮಧುಗಿರಿಯ ಪಣ್ಣೆ ರೈತರು ಸುಮಾರು ಎಪ್ಪತ್ತು ಸಹಸ್ರ ರೂಪಾಯಿಗಳ ವೆಚ್ಚದಲ್ಲಿ ಸುಪ್ರಸಿದ್ಧ ಕಲಾವಿದರಾದ ಶ್ರೀ ಡಿ. ಎಂ. ವಿಶ್ವಮೂರ್ತಿಯವರಿಂದ ಒಂದು ದಿವ್ಯವಾದ ಬೆಳ್ಳಿಯ ಪಲ್ಲಕ್ಕಿ ಯನ್ನು ತಯಾರಿಸಿ ಇದನ್ನು ಶ್ರೀ ದಂಡಿನ ಮಾರಮ್ಮನವರಿಗೆ ಕಾಣಿಕೆಯಾಗಿ ಸಮರ್ಪಣೆಯ ಕಾರ್ಯ ಕ್ರಮವನ್ನು ಏರ್ಪಡಿಸಿದ್ದರು.

   ಈ ಭವ್ಯವಾದ ಬೆಳ್ಳಿಯ ಪಲ್ಲಕ್ಕಿಯಲ್ಲಿ ಅಮ್ಮ ವರನ್ನು ಮಂಡಿಸಿ ಬೆಳ್ಳಿಪಲ್ಲಕ್ಕಿಯ ಉದ್ಘಾಟನಾ ಕಾರ್ಯಕ್ರಮವನ್ನು ದಿ. 31-3-1965 ರ ಸಂಜೆ 4:30 ಕ್ಕೆ. ಅಂದಿನ ಜನ ಮೆಚ್ಚಿನ ಮಹಾರಾಜರವರಾದ ಶ್ರೀ ಜಯಚಾಮರಾಜ ಒಡೆಯರ್ ಬಹದ್ದೂರ್ ಜಿ.ಸಿ.ಎಸ್.ಐ., ಜಿ.ಬಿ.ಇ., ರವರು ತಮ್ಮ `ಅಮೃತಹಸ್ತದಿಂದ ಈ ಉದ್ಘಾಟನಾ ಸಮಾರಂಭೋತ್ಸವವನ್ನು ನೆರವೇರಿಸಿದ್ದರು.

    ಅಧ್ಯಕ್ಷರು ಹಾಗೂ ಕಾರ್ಯಕಾರೀ ಸಮಿತಿ ಸದಸ್ಯರ ಅಗಿದ್ದ ಎಂ ಎನ್ ಬಸಪ್ಪ ನವರು ಹಾಗೂ ಇತರರು ಮೈಸೂರಿನ ಮಹರಾಜರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು 2025 ರ ಮಾ.19 ಕ್ಕೆ ಬೆಳ್ಳಿ ಪಲ್ಲಕ್ಕಿಯು ಲೋಕಾರ್ಪಣೆಗೊಂಡು 60 ವರ್ಷಗಳು ಕಳೆಯುತ್ತಿದ್ದು ಅಂದಿನಿಂದ ಇಂದಿನ ವರೆವಿಗೂ ಜಾತ್ರ ಮಹೋತ್ಸವು ಎಲ್ಲಾರ ಸಹಕಾರದಿಂದ ವಿಜೃಂಭಣೆಯಿಂದ ನೇರವೇರಿಸಲಾಗುತ್ತಿದೆ.