ಸಿಲ್ಕ್ ಅಂಡ್ ಮಿಲ್ಕ್ ಖ್ಯಾತಿ ಜೊತೆಗೆ ಗುಲಾಬಿ ನಾಡು ಎಂಬ ಪ್ರಖ್ಯಾತಿ ಪಡೆದ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ:
-ಕೆಂಪೇಗೌಡ ಎನ್.ವೆಂಕಟೇನಹಳ್ಳಿ
ಸಿಲ್ಕ್ ಅಂಡ್ ಮಿಲ್ಕ್ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯೂ ಗುಲಾಬಿ ನಾಡು ಎಂಬ ಪ್ರಖ್ಯಾತಿಗೆ ಪಾತ್ರವಾಗಿದೆ. ಇಲ್ಲಿ ಬೆಳೆಯುವ ಕೆಂಪು ಗುಲಾಬಿ ಹೂ ದೇಶವಲ್ಲದೇ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ.
ಅದರಲ್ಲೂ ಫೆಬ್ರವರಿ 14 ರಂದು ಪ್ರೇಮಿಗಳ ದಿನ. ಈ ದಿನದಂದು ಪ್ರೀತಿಯ ಸಂಕೇತವಾಗಿರುವ ಕೆಂಪು ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ ಇದ್ದು, ಜಿಲ್ಲೆಯಲ್ಲಿ ಬೆಳೆಯುತ್ತಿರುವ ಗುಲಾಬಿಗೆ ದೇಶ-ವಿದೇಶಿ ಪ್ರೇಮಿಗಳಿಂದ ಬೇಡಿಕೆ ಹೆಚ್ಚು.
ವಿದೇಶಕ್ಕೆ ರಫ್ತು: ಇಲ್ಲಿ ಬೆಳೆಯುವ ಗುಲಾಬಿ ದೇಶ ವಿದೇಶಗಳಿಗೆ ರಫ್ತಾಗುತ್ತಿದೆ. ಇಲ್ಲಿನ ಪ್ರಗತಿ ಪರ ರೈತರು ತಮ್ಮ ಪಾಲಿ ಹೌಸ್‌ನಲ್ಲಿ ಬೆಳೆಯುತ್ತಿರುವ ನಾನಾ ಬಗೆಯ ಗುಲಾಬಿಗಳಲ್ಲಿ ಒಂದಾದ ತಾಜ್ಮಹಲ್, ವ್ಯಾನಿಷ್, ಮೇರಾ ಬುಲ್, ಮಾರಿ ಗೋಲ್ಟ್, ಐಶ್ವರ್ಯ ರೈ 1 ಅಂಡ್ 2, ಸೆಂಟ್ ಯಲ್ಲೋ, ಸೆಂಟ್ ವೈಟ್ ಗುಲಾಬಿ ಸಿಂಗಾಪೂರ್, ಮಲೇಶಿಯಾ, ಆಸ್ಟೆçÃಲಿಯಾ, ಯುರೋಪ್ ರಾಷ್ಟçಗಳಲ್ಲಿ ಪ್ರೇಮಿಗಳ ಮನ ಗೆದ್ದಿದೆ.
ಫೆ. 14 ರವರೆಗೆ ಈ ರಫ್ತು ಪ್ರಕ್ರಿಯೆ ಮುಂದುವರಿಯಲಿದೆ. ವಿದೇಶಗಳಲ್ಲಿ ಫೆಬ್ರುವರಿ ತಿಂಗಳಲ್ಲಿ ಪ್ರೇಮಿಗಳ ದಿನಕ್ಕೆ 7 ದಿನಗಳ ಮುಂಚಿತವಾಗಿ ರೋಸ್ ಡೇ, ಪ್ರಪ್ರೋಸ್ ಡೇ, ಪ್ರಾಮೀಸ್ ಡೇ, ಹಗ್ ಡೇ, ಕಿಸ್ ಡೇ ಸೇರಿದಂತೆ ನಾನಾ ರೀತಿಯ ಡೇ ಗಳನ್ನು ಆಚರಿಸಲಾಗುತ್ತದೆ. ಅದಕ್ಕಾಗಿಯೇ ಒಂದು ತಿಂಗಳು ಮುಂಚಿತವಾಗಿ ಕೆಂಪು ಗುಲಾಬಿಗಳಿಗೆ ವಿದೇಶದಲ್ಲಿ ಹೆಚ್ಚು ಬೇಡಿಕೆ ಪಡೆದಿದೆ.
ರೈತರ ಕೈ ಹಿಡಿದ ರೋಸ್!: ಚಿಕ್ಕಬಳ್ಳಾಪುರದಲ್ಲಿ ಯಾವುದೇ ಶಾಶ್ವತ ನದಿ ಮೂಲಗಳಿಲ್ಲ. ಕೊಳವೆ ಬಾವಿಯ ನೀರನ್ನೇ ಬಳಸಿಕೊಂಡು ಇಲ್ಲಿನ ರೈತರು ಗುಲಾಬಿ, ತರಕಾರಿ, ದ್ರಾಕ್ಷಿ, ದಾಳಿಂಬೆಯAತಹ ಮಾದರಿ ಬೆಳೆಗಳನ್ನು ಬೆಳೆದು ದೇಶ-ವಿದೇಶಗಳಿಗೆ ರಫ್ತು ಮಾಡಿ ಗಮನ ಸೆಳೆಯುತ್ತಿರುವುದು ವಿಶೇಷ.
ಸ್ಥಳೀಯವಾಗಿ ಬೇಡಿಕೆ ಹೆಚ್ಚು: ಕೆಂಪು ಗುಲಾಬಿಗೆ ವಿದೇಶಗಳಲ್ಲಿ ಸ್ಥಳೀಯ ದರಕ್ಕಿಂತ ದುಪ್ಪಟ್ಟು, ತ್ರಿಪಟ್ಟು ಬೆಲೆ ಸಿಗುತ್ತದೆ. ಒಂದು ಹೂ 20 ರೂ. ಬೆಲೆ ಇಲ್ಲಿದ್ದರೆ ವಿದೇಶದಲ್ಲಿಎರಡು ಪಟ್ಟು ಬೆಲೆ ಸಿಗುತ್ತದೆ. ಆದರೆ, ಹೂವಿನ ಗುಣಮಟ್ಟ, ಸೌಂದರ್ಯ ಹೊಂದಿರಬೇಕು. ಇದಕ್ಕಾಗಿ ಹೂವಿನ ಪ್ಯಾಂಕಿಂಗ್ ಕೂಡ ಮಾರುಕಟ್ಟೆಯಲ್ಲಿ ಮುಖ್ಯವಾಗುತ್ತದೆ. ಇತ್ತೀಚೆಗೆ ಸ್ಥಳೀಯ ಮಾರುಕಟ್ಟೆಯಲ್ಲೂ ಮದುವೆ, ದೇವರ ಪಲಕ್ಕಿ ಉತ್ಸವ ಮೆರವಣಿಗೆ, ಸಭೆ, ಸಮಾರಂಭಗಳಲ್ಲಿ ಈ ಗುಲಾಬಿ ಬಳಕೆ ಹೆಚ್ಚುತ್ತಿದ್ದು, ಬೇಡಿಕೆಯೂ ಬಹಳಷ್ಟಿದೆ.
ಅಲ್ಲದೇ ಹೈದರಾಬಾದ್, ಕೇರಳ, ಮುಂಬೈ, ದೆಹಲಿ ಇನ್ನಿತರ ದೇಶದ ಪ್ರಮುಖ ನಗರಗಳಿಗೂ ಜಿಲ್ಲೆಯಿಂದ ಗುಲಾಬಿ ರಫ್ತು ಆಗುತ್ತಿದೆ. ವಿದೇಶಕ್ಕೆ ಹೋಲಿಕೆ ಮಾಡಿದರೆ ಸ್ಥಳೀಯವಾಗಿ ಸಿಗುವ ಬೆಲೆ ಕಡಿಮೆಯಾದರೂ, ರಫ್ತಿಗೆ ತಗಲುವ ವೆಚ್ಚ ಹೋಲಿಸಿದರೆ ಸ್ಥಳೀಯ ಮಾರುಕಟ್ಟೆಯೇ ಲಾಭದಾಯಕ ಎನ್ನುತ್ತಾರೆ ಚಿಕ್ಕಬಳ್ಳಾಪುರ ಹೂ ಬೆಳೆಗಾರ ರಾಜೇಶ್.
ವಿದೇಶದಲ್ಲಿ ಡಬಲ್ ರೇಟ್:
ಪ್ರೇಮಿಗಳ ದಿನಾಚರಣೆ ಅಂಗವಾಗಿ ವಿದೇಶದಲ್ಲಿ ಕೆಂಪು ಗುಲಾಬಿಗೆ ಕಳೆದು ಒಂದು ವಾರದಿಂದ ಬೇಡಿಕೆ ಹೆಚ್ಚಾಗಿದೆ. ಸ್ಪದೇಶದಲ್ಲಿ ಒಂದು ಗುಲಾಬಿ ಹೂವಿನ ಬೆಲೆ 10 ರೂ. ಗೆ ಮಾರಾಟವಾದರೆ ಇದೇ ಹೂ ವಿದೇಶಗಳಲ್ಲಿ 20 ರಿಂದ 30 ರೂ. ಗೆ ಮಾರಾಟವಾಗಲಿದೆ. 20 ಹೂ. ಗಳ 1 ಬಂಚ್‌ಗೆ 150 ರಿಂದ 200 ರೂ. ಮಾರಾಟವಾಗಲಿದೆ. ಅಲ್ಲದೇ ಸ್ಥಳೀಯವಾಗಿ ಬೇಡಿಕೆ ಹೆಚ್ಚಾದಾಗ ಗ್ರಾಹಕರೇ ತಮ್ಮಲ್ಲಿಯೇ ಬಂದು ಹೂಗಳನ್ನು ಖರೀದಿಸುತ್ತಾರೆ ಅಂತಾರೆ ಇಲ್ಲಿನ ಗುಲಾಬಿ ಬೆಳೆಯುವ ರೈತರು.
ವೈರಟಿ ಗುಲಾಬಿ ಹೂಗಳು : ಜಿಲ್ಲೆಯಲ್ಲಿ ತಾಜ್ಮಹಲ್, ಮಾರಿ ಗೋಲ್ಡ್, ವ್ಯಾನಿಷ್, ಮೇರಾ ಬುಲ್, ಸೆಂಟ್ ಯಲ್ಲೋ, ಸೆಂಟ್ ವೈಟ್ ಸೇರಿದಂತೆ ಹತ್ತಾರು ತಳಿಗಳ ಗುಲಾಬಿ ಹೂಗಳನ್ನು ರೈತರು ಈ ಸೀಸನ್‌ನಲ್ಲಿ ಬೆಳೆಯುತ್ತಾರೆ. ಪ್ರಸ್ತುತ ಒಂದು ಕೆ.ಜಿ ಗುಲಾಬಿ ಹೂ 150 ರಿಂದ 250 ರೂ.ನಷ್ಟು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಎಂದು ಗುಲಾಬಿ ಬೆಳೆಗಾರ ನಂದಿ ಗಂಗಾಧರ್ ಅವರು ಹೇಳುತ್ತಾರೆ.
ಗುಲಾಬಿ ಬೆಳೆಗಾರರ ಆಗ್ರಹ :ಜಿಲ್ಲೆಯಲ್ಲಿ ಗುಲಾಬಿ ಹೂವಿನ ಮಾರಾಟಕ್ಕೆ ಸಮರ್ಪಕ ಮಾರುಕಟ್ಟೆ ಸೌಲಭ್ಯ ಇಲ್ಲ. ಜತೆಗೆ ಶೀತಲ ಗೃಹವೂ ಇಲ್ಲದ ಕಾರಣ ಕೊಯ್ಲು ಮಾಡಿರುವ ಹೂವನ್ನು ಎರಡು ದಿನದ ಮೇಲೆ ಶೇಖರಿಸಿಡಲು ಸಾಧ್ಯವಿಲ್ಲ. ಗುಲಾಬಿ ಹೂ ಬೆಳೆಯಲು ತೋಟಾಗಾರಿಕೆ ಇಲಾಖೆಯಿಂದ ಪಾಲಿಹೌಸ್‌ಗಳ ನಿರ್ಮಾಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಗುಲಾಬಿ ಬೆಳೆಗಾರರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ