ನೇಪಾಳ ವಿಮಾನ ದುರಂತ : 2 ಸಾವು 5 ಮಂದಿಗೆ ಗಾಯ

0
21
ಕಠ್ಮಂಡು:
       ಇಂದು ನೆರೆಯ ನೇಪಾಳದ ವಿಮಾನ ನಿಲ್ದಾಣದ ಅಮೀಪದಲ್ಲಿ ಸಂಭವಿಸಿದ  ವಿಮಾನ ಅಪಘಾತದಲ್ಲಿ  ಇಬ್ಬರು ಮೃತಪಟ್ಟಿದ್ದು ಐದು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
      ಇಂದು  ಬೆಳಿಗ್ಗೆ ನೇಪಾಳದ ಸೋಲುಂಖುಬು ಜಿಲ್ಲೆ ಖುಂಬು ಪ್ರದೇಶದ ಲೂಕ್ಲಾ ವಿಮಾನ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದ್ದು .ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಹೆಲಿಕಾಪ್ಟರ್ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
       ಲೂಕ್ಲಾದಿಂಡ ಕಠ್ಮಂಡುವಿಗೆ ಈ ಸುಮಿತ್ ವಿಮಾನ ಪ್ರಯಾಣಿಸುತ್ತಿತ್ತು. ಅಪಘಾತದಲ್ಲಿ ಓರ್ವ ಪೋಲೀಸ್ ಸಿಬ್ಬಂದಿ ಸೇರಿ ಐವರು ಗಾಯಗೊಂಡಿದ್ದು ಅವರನ್ನು ತುರ್ತು ವಿಮಾನದ ಮೂಲಕ ಚಿಕಿತ್ಸೆಗಾಗಿ ಕಠ್ಮಂಡುವಿಗೆ ರವಾನಿಸಲಾಗಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here