ಖಾಯಂ ಸದಸ್ಯತ್ವ: ಭಾರತದ ಪರ ನಿಂತ ಫ್ರಾನ್ಸ್…!!

0
90
ಯುನೈಟೆಡ್ ನೇಶನ್ಸ್:
   
          ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಹೊಂದಿರುವ ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತಕ್ಕೂ ಸಹ ಖಾಯಂ ಸದಸ್ಯ  ಸ್ಥಾನ ನೀಡಬೇಕೆಂದು ಶಿಫಾರಸು ಮಾಡಿದೆ. ಭದ್ರತಾ ಮಂಡಳಿಯ ಸುಧಾರಣೆಗೆ ಮಂಡಳಿಯ ಸದಸ್ಯರ ಸ್ಥಾನವನ್ನು ವಿಸ್ತರಿಸುವುದು ಮೊದಲ ಬಹುಮುಖ್ಯ ಭಾಗವಾಗಿದೆ.

         ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ಬ್ರೆಜಿಲ್, ಜರ್ಮನಿ, ಜಪಾನ್ ದೇಶಗಳೊಂದಿಗೆ ಭಾರತ ಒತ್ತಾಯಿಸುತ್ತಾ ಬಂದಿದೆ. ಅಲ್ಲದೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ ಸ್ಥಾನಕ್ಕೆ ತನಗೆ ಹೆಚ್ಚಿನ ಅರ್ಹತೆ ಇದೆ ಎಂದು ಭಾರತ ಹೇಳುತ್ತಾ ಬಂದಿದೆ .

         ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ರಾಷ್ಟ್ರಗಳಲ್ಲಿ ಶಾಶ್ವತ ಸ್ಥಾನ ಪಡೆದಿರುವ ಫ್ರಾನ್ಸ್ ಕಳೆದ ತಿಂಗಳು ಖಾಯಂ ಸದಸ್ಯತ್ವದ ಪ್ರಸ್ತಾವನೆಯನ್ನು ಸಲ್ಲಿಸಿ ಪಾಕಿಸ್ತಾನ ಮೂಲದ ಜೈಶ್ ಎ ಮೊಹಮ್ಮದ್ ಸಂಘಟನೆಯನ್ನು ಮತ್ತು ಅದರ ಮುಖ್ಯಸ್ಥ ಮಸೂದ್ ಅಜರ್ ಗೆ ಜಾಗತಿಕ ಭಯೋತ್ಪಾದಕ ಎಂಬ ಹಣೆಪಟ್ಟಿ ನೀಡಬೇಕು ಎಂದು ಒತ್ತಾಯಿಸಿತ್ತು. ಅಮೆರಿಕಾ ಮತ್ತು ಇಂಗ್ಲೆಂಡ್ ಗಳು ಕೂಡ ಪ್ರಸ್ತಾವನೆ ಸಲ್ಲಿಸಿವೆ.
          ವಿಶ್ವಸಂಸ್ಥೆಯ ಖಾಯಂ ರಾಷ್ಟ್ರಗಳಾಗಿ ಜರ್ಮನಿ ಮತ್ತು ಜಪಾನ್ ಭಾರತಕ್ಕೆ  ಖಾಯಂ ಸದಸ್ಯ ರಾಷ್ಟ್ರ ಸ್ಥಾನಮಾನ ನೀಡಬೇಕೆಂದು ಈಗಾಗಲೇ ಶಿಫಾರಸು ಮಾಡಿದ್ದು ಈ ನಿಟ್ಟಿನಲ್ಲಿ ಪ್ರಾನ್ಸ್ ಕೂಡ  ಪ್ರಸ್ತಾವನೆ ಸಲ್ಲಿಸಿದೆ ಎಂದು ತಿಳಿಸಲಾಗಿದೆ .
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here