ನವದೆಹಲಿ:
2 ಬಿಲಿಯನ್ ಡ ಡಾಲರ್ ಪಿಎನ್‌ಬಿ ಹಗರಣ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿಯ ಕಿರಿಯ ಸಹೋದರ ನೇಹಾಲ್ ಮೋದಿ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ (ಆರ್‌ಸಿಎನ್) ನೀಡಿದೆ.
ಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಬೆಲ್ಜಿಯಂ ಪ್ರಜೆಯಾಗಿರುವ ನೆಹಾಲ್ (40) ಅವರ ವಿರುದ್ಧ ಆರ್ ಸಿ ಎನ್ ಜಾರಿಗೊಳಿಸಲಾಗಿದ್ದು, ಸದ್ಯ ಭಾರತದ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ನೇಹಾಲ್ ಮೋದಿಯವರಿಗೆ ಗುಜರಾತಿ ಮತ್ತು ಹಿಂದಿ ಭಾಷೆಗಳು ಸುಲಲಿತವಾಗಿ ಬರುತ್ತವೆ ಮತ್ತು ಅವರು ಆ್ಯಂಟ್ ವ್ರಪ್ ನಗರದಲ್ಲಿ ಜನಿದರು ಎಂದು ತಿಳಿದು ಬಂದಿದೆ ಎಂದು ಇಂಟರ್‌ಪೋಲ್ ತಿಳಿಸಿದೆ.
ಪರಾರಿಯಾಗಿರುವ ನೇಹಾಲ್ ವಿರುದ್ಧ ಹೊರಡಿಸಿರುವ ಆರ್‌ಸಿಎನ್‌ನಲ್ಲಿ, ಇಂಟರ್‌ಪೋಲ್ ತನ್ನ 192 ಸದಸ್ಯ ರಾಷ್ಟ್ರಗಳನ್ನು ತಮ್ಮ ದೇಶಗಳಲ್ಲಿ ನೇಹಾಲ್ ಎಲ್ಲಿಯಾದರೂ ಕಾಣಿಸಿದರೆ ಆವರನ್ನು ಕೂಡಲೆ ಬಂಧಿಸಬೇಕು ಎಂದು ಕೇಳಿಕೊಂಡಿದೆ,ಮತ್ತು ಹಸ್ತಾಂತರ ಮಾಡಬೇಕು ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
