ಢಾಕಾ: 

ನಮ್ಮ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಶೇಖ್ ಹಸೀನಾ ಅವರ ನಾಯಕತ್ವದ ಅವಾಮಿ ಲೀಗ್ ಪಕ್ಷಕ್ಕೆ ಬಹುಮತ ದೊರೆತಿದ್ದು ಶೇಖ್ ಹಸೀನಾ ಪ್ರಧಾನಿಯಾಗಿ ಪುನರಾಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಶೇಖ್ ಹಸೀನಾ ಅವರ ಪಕ್ಷದ ಅಭ್ಯರ್ಥಿಗಳು ಸರ್ಕಾರ ರಚನೆಗೆ ಬೇಕಾಗಿರುವ 151 ಸ್ಥಾನಗಳಲ್ಲಿ ಗೆದ್ದಿದ್ದಾರೆ ಎಂದು ಬಾಂಗ್ಲಾದೇಶದ ಚುನಾವಣಾ ಆಯೋಗ ಸ್ಪಷ್ಟ ಪಡಿಸಿದೆ.
ನಿನ್ನೆ ಪ್ರಕಟವಾದ ಫಲಿತಾಂಶದ ಪ್ರಕಾರ ಹಸೀನಾ ಅವರ ವಿರುದ್ಧವಾಗಿ ಒಗ್ಗಟ್ಟಾಗಿ ನಿಂತಿದ್ದ ವಿಪಕ್ಷಗಳ ಮೈತ್ರಿಕೂಟ ಹೀನಾಯ ಸೋಲು ಕಂಡಿದ್ದು ಕೇವಲ 5 ಸ್ಥಾನಗಳಲ್ಲಿ ಗೆಲಯುವ ಮೂಲಕ ಸೋಲನ್ನು ಒಪ್ಪಿಕೊಂಡಂತಾಗಿದೆ, ಇನ್ನೊಂದೆಡೆ ಅವಾಮಿ ಲೀಗ್ ಹಾಗೂ ಮಿತ್ರ ಪಕ್ಷಗಳು ಒಟ್ಟಾರೆಯಾಗಿ ಸುಮಾರು 191 ಸ್ಥಾನಗಳಲ್ಲಿ ಗೆದ್ದು ಗೆಲುವಿನ ನಗೆ ಬೀರಿದ್ದಾರೆ ಎಂದು ತಿಳಿದು ಬಂದಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
