ಬೆಂಗಳೂರು;
ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿಹರಿಹರನ್ ವಿರುದ್ದ ಬಹುಭಾಷಾನಟ ಅರ್ಜುನ್‍ಸರ್ಜಾ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದಾರೆ.
ಬೆಂಗಳೂರಿನ ಸಿವಿಲ್‍ಕೋರ್ಟ್‍ನಲ್ಲಿ ಇಂದು ನಟ ಧ್ರುವಸರ್ಜಾ ಮೂಲಕ ಪ್ರಕರಣ ದಾಖಲಿಸಲಾಗಿದ್ದು, ದುರುದ್ದೇಶ ಪೂರ್ವಕವಾಗಿ ನನ್ನ ವಿರುದ್ದ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ನನಗೆ ಮಾನಹಾನಿಯಾಗಿದ್ದು, 5ಕೋಟಿ ರೂ.ಗಳಿಗೆ ಮಾನನಷ್ಟ ಮೊಕದ್ದಮ್ಮೆ ದಾಖಲಿಸಲಾಗಿದೆ.ನನ್ನ ವಿರುದ್ದ ಚಾರಿತ್ರ್ಯವಧೆ ಮಾಡಲಾಗಿದ್ದು, ಇಂದು ಅಥವಾ ನಾಳೆ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
