ಮುಂಬಯಿ:
‘ನ್ಯೂರೋ ಎಂಡೋಕ್ರೈನ್ ಟ್ಯೂಮರ್’ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ವಿಧಿವಶರಾಗಿದ್ದಾರೆ.
54 ವರ್ಷದ ಇರ್ಫಾನ್ ಖಾನ್ ಕಳೆದ ಕೆಲ ವರ್ಷಗಳಿಂದ ನ್ಯೂರೋಎಂಡೋಕ್ರೈನ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರ ಆರೋಗ್ಯ ಗಂಭೀರವಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಂಬೈನ ಕೋಕಿಲಾಬೆನ್ ಧಿರುಬಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಿಸದೇ ಇರ್ಫಾನ್ ಖಾನ್ ಕೂಡ ಕೊನೆಯುಸಿರೆಳಿದಿದ್ದಾರೆಂದು ಆಪ್ತ ಸುಜಿತ್ ಸ್ಪಷ್ಟಪಡಿಸಿದ್ದಾರೆ.
ಕಳೆದ 3 ದಿನಗಳ ಹಿಂದಷ್ಟೇ ಇರ್ಫಾನ್ ಖಾನ್ ಅವರ ತಾಯಿ ಕೂಡ ಮೃತಪಟ್ಟಿದ್ದರು. ತಮ್ಮ ತಾಯಿಯ ಸಾವಿನ ಬೆನ್ನಲ್ಲೇ ಬಾಲಿವುಡ್ ನಟ ಇರ್ಫಾನ್ ಖಾನ್ ಕೂಡ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದು, ಅಮ್ಮನನ್ನು ಕಳೆದುಕೊಂಡ ದಿನ ನಟ ಇರ್ಫಾನ್ ಖಾನ್ ಮುಂಬೈಯಲ್ಲಿ ಉಳಿದಿದ್ದರು. ಕೊರೋನಾ ಲಾಕ್ಡೌನ್ನಿಂದಾಗಿ ಜೈಪುರಕ್ಕೆ ತೆರಳಲಾಗದೆ ವಿಡಿಯೋ ಕರೆಯ ಮೂಲಕ ತಾಯಿಯ ಅಂತ್ಯ ಸಂಸ್ಕಾರವನ್ನು ವೀಕ್ಷಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಇರ್ಫಾನ್ ಮೃತಪಟ್ಟಿದ್ದಾರೆ.