ನ್ಯೂಸ್ ಚಾನಲ್​ಗಳ ಟಿಆರ್​ಪಿ ರೇಟಿಂಗ್ 3 ತಿಂಗಳ ಕಾಲ ಸ್ಥಗಿತ!!

 

ನವದೆಹಲಿ :

     ಟಿಆರ್‌ಪಿ ವಿವಾದದ ನಂತರ ಮುಂದಿನ ಕೆಲವು ವಾರಗಳವರೆಗೆ ಸುದ್ದಿ ಚಾನೆಲ್ ಟಿಆರ್‌ಪಿ ಬಿಡುಗಡೆ ಮಾಡುವುದಿಲ್ಲವೆಂದು ಬ್ರೋಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್(BARC) ಹೇಳಿದೆ.

     ಇತ್ತೀಚೆಗೆ ಮುಂಬೈನಲ್ಲಿ ಟಿಆರ್​ಪಿ ಗೋಲ್ಮಾಲ್ ಬೆಳಕಿಗೆ ಬಂದ ಬೆನ್ನಲ್ಲೇ ಬಾರ್ಕ್ ಸಂಸ್ಥೆ ಎಲ್ಲಾ ಸುದ್ದಿ ವಾಹಿನಿಗಳ ಟಿಆರ್​ಪಿಯನ್ನು ಮೂರು ತಿಂಗಳ ಕಾಲ ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ, ಸುದ್ದಿ ಚಾನೆಲ್‌ಗಳನ್ನು ಹೊರತುಪಡಿಸಿ, ಎಲ್ಲಾ ಮನರಂಜನಾ ಚಾನೆಲ್‌ಗಳು ಮತ್ತು ಪ್ರಾದೇಶಿಕ ಚಾನೆಲ್‌ಗಳ ರೇಟಿಂಗ್‌ಗಳು ಮೊದಲಿನಂತೆ ಸಿಗಲಿದೆ.

      ರೇಟಿಂಗ್ ವಿವಾದದ ನಂತ್ರ ರೇಟಿಂಗ್ ಅಳೆಯುವ ಮಾಪಕಗಳನ್ನು ಪ್ರಸ್ತುತ ತಾಂತ್ರಿಕ ಸಮಿತಿಯು ಪರಿಶೀಲಿಸುತ್ತಿದೆ. ಡೇಟಾದ ಗುಣಮಟ್ಟವನ್ನು ಸುಧಾರಿಸಲಾಗುತ್ತದೆ. ಎಲ್ಲಾ ರಾಷ್ಟ್ರೀಯ, ಪ್ರಾದೇಶಿಕ ಮತ್ತು ವ್ಯವಹಾರ ಸುದ್ದಿ ಚಾನೆಲ್‌ಗಳ ರೇಟಿಂಗ್ ಪ್ರಕ್ರಿಯೆಯನ್ನು ಪರಿಶೀಲಿಸಲಾಗುತ್ತದೆ. ಇದಕ್ಕೆ 8-12 ವಾರ ಹಿಡಿಯಬಹುದೆಂದು ಬಾರ್ಕ್ ಹೇಳಿದೆ.

ಟಿಆರ್​ಪಿ :

TV ratings: How they work and what they mean - tv - Hindustan Times

     ಟಿಆರ್​ಪಿ ಎಂದರೆ ಟೆಲಿವಿಶನ್ ರೇಟಿಂಗ್ ಪಾಯಿಂಟ್ಸ್. ಇದು ನ್ಯೂಸ್ ಚಾನೆಲ್​ಗಳನ್ನೂ ಸೇರಿ ಟಿವಿ ವಾಹಿನಿಗಳನ್ನು ಎಷ್ಟು ಮಂದಿ ವೀಕ್ಷಿಸುತ್ತಾರೆ ಎಂದು ಅಂದಾಜು ಮಾಡುವ ಸ್ವಯಂಚಾಲಿತ ಸಮೀಕ್ಷಾ ವ್ಯವಸ್ಥೆಯಾಗಿದೆ. ಬಾರ್ಕ್ ಸಂಸ್ಥೆ ಈ ಕಾರ್ಯವನ್ನ ನಿರ್ವಹಿಸುತ್ತದೆ. ದೇಶದ ಅನೇಕ ನಗರ, ಪಟ್ಟಣ, ಗ್ರಾಮಗಳಲ್ಲಿ ಸೆಟ್ ಟಾಪ್ ಬಾಕ್ಸ್ ಇರುವ ಕೆಲ ಆಯ್ದ ಮನೆಗಳಲ್ಲಿ ರಹಸ್ಯವಾಗಿ ಟಿಆರ್​ಪಿ ಮೀಟರ್​ಗಳನ್ನ ಅಳವಡಿಸಲಾಗುತ್ತದೆ. ಈ ಮೀಟರ್​ಗಳಿರುವುದು ಆ ಮನೆಗಳವರಿಗೂ ಗೊತ್ತಿರುವುದಿಲ್ಲ. ಆ ಮನೆಗಳಲ್ಲಿ ಏನು ವೀಕ್ಷಣೆ ಮಾಡುತ್ತಾರೆ ಅದರ ಮೇಲೆ ಟಿಆರ್​ಪಿ ನಿರ್ಧಾರವಾಗುತ್ತದೆ.

    ತನಗೆ ಸಬ್​ಸ್ಕ್ರೈಬ್ ಆಗುವ ಟಿವಿ ವಾಹಿನಿಗಳು, ಜಾಹೀರಾತುದಾರರಿಗೆ ಬಾರ್ಕ್ ಸಂಸ್ಥೆ ಟಿಆರ್​ಪಿ ಸೇವೆ ನೀಡುತ್ತದೆ. 

      ಬಾರ್ಕ್ ಹಿಂದಿ, ಇಂಗ್ಲೀಷ್, ಪ್ರಾದೇಶಿಕ ಮತ್ತು ವಾಣಿಜ್ಯ ಸುದ್ದಿ ಚಾನೆಲ್ ಗಳ ರೇಟಿಂಗ್ ಬಿಡುಗಡೆ ಮಾಡುವುದಿಲ್ಲ. ಆದ್ರೆ ರಾಜ್ಯ ಹಾಗೂ ಭಾಷಾ ಸುದ್ದಿ ಚಾನೆಲ್ ಗಳ ಒಟ್ಟಾರೆ ಅಂಕಿಅಂಶವನ್ನು ಬಿಡುಗಡೆ ಮಾಡಲಿದೆ. ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್, ಬಾರ್ಕ್ ಈ ನಿರ್ಧಾರವನ್ನು ಸ್ವಾಗತಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap