ಅಂಧನ ಸಾಧನೆ : ಶುಭ ಹಾರೈಸಿದ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ:

    ಅಂಧನಾಗಿದ್ದರು ಕೂಡ ತನ್ನ ಛಲ ಬಿಡದೆ ಸತತ ಪ್ರಯತ್ನ ಮೂಲಕ ಪ್ರಜ್ವಲ್ ಜಿಲ್ಲೆಗೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಶುಭ ಹಾರೈಸಿದ್ದಾರೆ.

   ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬೆಳಗಾವಿ‌ ಮಾಹೇಶ್ವರಿ ಅಂಧ ಮಕ್ಕಳ ಶಾಲೆಯ 8ನೇ ತರಗತಿಯ ಪ್ರಜ್ವಲ್ ಸು. ಹನುಮನಟ್ಟಿ ಎಂಬ ವಿದ್ಯಾರ್ಥಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ಯಾರಾ ಸ್ವಿಮಿಂಗ್ ಚಾಂಪಿಯನ್ ಷಿಪ್ ನ ವಿವಿಧ ಪ್ರಿ ಸ್ಟೈಲ್ ಹಾಗೂ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ, ಒಟ್ಟು 6 ಚಿನ್ನದ ಪದಕಗಳನ್ನು ಪಡೆದುಕೊಂಡು, ಜಿಲ್ಲೆಗೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ.

   ಬೆಳಗಾವಿ ಗ್ರಾಮೀಣ ಕ್ಷೇತ್ರದ ಕೆಕೆ ಕೊಪ್ಪ ಗ್ರಾಮದ ಪ್ರಜ್ವಲ್ ಅಪ್ಪಟ ಹಳ್ಳಿ ಪ್ರತಿಭೆಯಾಗಿದ್ದು, ಭಾಗಶಃ ಅಂಧನಾಗಿದ್ದರು ಕೂಡ ತನ್ನ ಛಲ ಬಿಡದೆ ಸತತ ಪ್ರಯತ್ನ, ಶಿಕ್ಷಕರ ಮಾರ್ಗದರ್ಶನದ ಫಲವಾಗಿ ಇಂದು 6 ಚಿನ್ನದ ಪದಕಗಳನ್ನು ಪಡೆದಿದ್ದಾನೆ. ಈತನ ಸಾಧನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಅಭಿನಂದಿಸಿ, ವಿದ್ಯಾರ್ಥಿಯ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಶುಭ ಹಾರೈಸಿದ್ದಾರೆ. ಈ ವೇಳೆ ಮಾಹೇಶ್ವರಿ ಅಂದ ಮಕ್ಕಳ ಶಾಲೆಯ ದೈಹಿಕ ಶಿಕ್ಷಕ ಸುರೇಶ ಸು ಮಾದಿಗರ, ಮುಖ್ಯೋಪಾಧ್ಯಾಯ ಅನಿತಾ ಗಾವಡೆ, ಸಂಗೀತ ಶಿಕ್ಷಕಿ ಸ್ಮಿತಾ ಮಿಟಗಾರ ಮುಂತಾದವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link