ಬೆಂಗಳೂರು
ಪಕ್ಷೇತರರ ನಿರ್ಧಾರ ಯಾವಾಗ ಬೇಕಾದರೂ ಬದಲಾಗಬಹುದು. ಅದಕ್ಕಾಗಿಯೇ ಅವರನ್ನು ಪಕ್ಷೇತರರು ಎಂದು ಕರೆಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸರ್ಕಾರಕ್ಕೆ ಪಕ್ಷೇತರರು ನೀಡಿದ ಬೆಂಬಲ ವಾಪಸ್ ಪಡೆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ದಿವಾಳಿತನದ ಬಗ್ಗೆ ಇಡೀ ದೇಶಕ್ಕೆ ಗೊತ್ತಾಗಿದ್ದರಿಂದ ಅವರು ವಿಚಲಿತರಾಗಿದ್ದಾರೆ. ಪಕ್ಷೇತರರಾದ ಆರ್.ಶಂಕರ್, ನಾಗೇಶ್ ಅವರು ಬೆಂಬಲ ಹಿಂಪಡೆದಿದ್ದರ ಬಗ್ಗೆಯಾಗಲಿ ಸರ್ಕಾರ ಅಸ್ಥಿರಗೊಳ್ಳುವ ಬಗ್ಗೆಯಾಗಲಿ ತಮಗೆ ಚಿಂತೆಯಿಲ್ಲ. ಮೈತ್ರಿ ಸರ್ಕಾರ ಸುದ್ರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
