ಬೋನಿಗೆ ಬಿದ್ದ ಚಿರತೆ

0
43

ಹರಪನಹಳ್ಳಿ:

         ಚಿರತೆಯೊಂದು ಬೋನಿಗೆ ಬಿದ್ದ ಘಟನೆ ತಾಲೂಕಿನ ಮತ್ತೂರು ಗ್ರಾಮದಲ್ಲಿ ಗುರುವಾರ ಜರುಗಿದೆ.ಮತ್ತೂರು ಗ್ರಾಮದ ಅಂಬ್ಲಿ ಶಿವರಾಮಪ್ಪನವರ ಇವರ ಕಣದಲ್ಲಿ ಎರಡು ನಾಯಿಗಳೊಂದಿಗೆ ಚಿರತೆ ಸೆರೆಹಿಡಿಯಲು ಬೋನನ್ನು ಅಳವಡಿಸಲಾಗಿತ್ತು. ಬುಧುವಾರ ಸಂಜೆ ನಾಲ್ಕು ಗಂಟೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೋನ್‍ನ್ನು ಅಳವಡಿಸಿ ಹೋಗಿದ್ದರು ಗುರುವಾರ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಚಿರತೆ ನಾಯಿಯ ವಾಸನೆಯೊಂದಿಗೆ ಬೋನಿಗೆ ಸೇರೆಯಾಗಿದೆ.

          ಚಿರತೆ ಬೋನಿಗೆ ಬಿದ್ದ ವಿಷಯವನ್ನು ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮುಟ್ಟಿಸಿ ಗ್ರಾಮಕ್ಕೆ ಅರಣ್ಯ ಸಿಬ್ಬಂಧಿಗಳು ಬೆಳಿಗ್ಗೆ ಆಗಮಿಸಿ ಸೇರೆಯಾಗಿದ್ದ ಚಿರತೆಯನ್ನು ದಾವಣಗೆರೆ ಬಳಿ ಇರುವ ಅನುಗೋಡಿಗೆ ತೆಗೆದುಕೊಂಡು ಹೋಗಿದ್ದಾರೆ. ಈ ಸಂದರ್ಭಧಲ್ಲಿ ಗ್ರಾಮಸ್ಥರು ಚಿರತೆ ಬೋನಿಗೆ ಬೀಳುತ್ತಿದ್ದಂತೆ ಅದನ್ನು ನೋಡಲು ಮುಗಿಬಿದ್ದಿದ್ದರು.

        ಕಳೆದ ಮೂರು ತಿಂಗಳಿಂದ ಕಡತಿ, ಕಡತಿ ಕ್ಯಾಂಪ್, ಮತ್ತೂರು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಚಿರತೆಗಳು ಓಡಾಟ ಕಂಡು ಬಂದಿದ್ದು ನಾಯಿ, ಕುರಿ, ಮೇಕೆ, ಎಮ್ಮೆ ಸೇರಿದಂತೆ 30 ವಿವಿಧ ಪ್ರಾಣಿಗಳ ಮೇಲೆ ದಾಳಿ ನಡೆಸಿ, ಸಾವನಪ್ಪಿದ್ದವು. ಇದರಿಂದ ಗ್ರಾಮಸ್ಥರು ಭಯಬೀತರಾಗಿದ್ದರು ಯಾವಾಗ ನಮ್ಮ ಮೇಲೆ ದಾಳಿ ಮಾಡುತ್ತದೆ ಎನ್ನುವ ಅತಂಕದಲ್ಲಿ ರೈತರು, ಕೂಲಿಕಾರರು ಕಾಲ ಕಳೆಯುತ್ತಿದ್ದರು.
ಇನ್ನು 2-3 ಚಿರತೆಗಳಿದ್ದು ಅವುಗಳನ್ನು ಸಹ ಸೆರೆ ಹಿಡಿಯಲು ಅರಣ್ಯ ಇಲಾಖೆ ಮತ್ತೆ ಬೋನನ್ನು ಅಳವಡಿಸುವುದಾಗಿ ತಿಳಿಸಿದ್ದಾರೆ ಎಂದು ಗ್ರಾಮದ ಜಿ.ಪ್ರಕಾಶ್ ತಿಳಿಸಿದರು.ಸ್ಥಳದಲ್ಲಿ ಅರಣ್ಯ ಸಿಬ್ಬಂದಿಗಳಾದ ಲಕ್ಷ್ಮಣ, ಅಶೋಕ, ಶಿವಕುಮಾರ., ಮಂಜುನಾಥ, ಕೊಟ್ರೇಶ್, ಅಂಬ್ಲಿ ಶಿವರಾಮಪ್ಪ, ಹಾಗೂ ಗ್ರಾಮಸ್ಥರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here