ಬಂಧಿತ ಆರೋಪಿಯಿಂದ 3 ಲಕ್ಷದ 54 ಸಾವಿರ ಮೌಲ್ಯದ ಆಭರಣಗಳು ವಶ

ಹರಿಹರ:

        ಮನೆಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ವಾಸಿಯಾದ ದಾದಾಪೀರ್ @ ಲಂಬೂದಾದು ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ ಒಟ್ಟು ನಾಲ್ಕು ಪ್ರಕರಣಗಳಲ್ಲಿ ರೂ.3,54,000 ಬೆಲೆ ಬಾಳುವ 118 ಗ್ರಾಂ ಬಂಗಾರದ ಆಭರಣ 20ಸಾವಿರ ಬೆಲೆಯ 500 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದೇವೆಂದು ವೃತ್ತ ನಿರೀಕ್ಷಕ ಎಸ್. ಲಕ್ಷ್ಮಣ್ ನಾಯ್ಕ ತಿಳಿಸಿದ್ದಾರೆ.

         ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಧಿತ ಆರೋಪಿಯು ಪ್ರಶಾಂತ್ ನಗರ ವಾಸಿ ಸೈಪುಲ್ಲ ಅವರ ಮನೆಯ ಬೀಗವನ್ನು ಮುರಿದು 62ಸಾವಿರ ಬೆಲೆಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ, ಈ ಸಂಬಂಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನುಳಿದ ಆರೋಪಿಗಳ ಪತ್ತೆಗಾಗಿ ಪೊಲೀಸ್ ಅಧೀಕ್ಷಕರಾದ ಆರ್.ಚೇತನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಟಿ.ಜೆ.ಉದೇಶ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಡಿವೈಎಸ್‍ಪಿ ಎಂ.ಕೆ.ಗಂಗಲ್ ಅವರ ನೇತೃತ್ವದಲ್ಲಿ ಹರಿಹರ ವೃತ್ತ ನಿರೀಕ್ಷಕ ಎಸ್.ಲಕ್ಷ್ಮಣ್‍ನಾಯಕ್, ನಗರಠಾಣೆಯ ಪಿಎಸ್‍ಐ ಶ್ರೀಧರ್ ಸಿಬ್ಬಂದಿ ಒಳಗೊಂಡ ತಂಡವನ್ನು ರಚನೆ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ.

      ಸದರಿ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಿ ಯಶಸ್ವಿಯಾದ ಗ್ರಾಮಾಂತರ ಡಿವೈಎಸ್‍ಪಿ ಎಂ.ಕೆ. ಗಂಗಲ್ ಅವರ ನೇತೃತ್ವದಲ್ಲಿ ಹರಿಹರ ವೃತ್ತ ನಿರೀಕ್ಷಕ ಎಸ್.ಲಕ್ಷ್ಮಣ್‍ನಾಯಕ್, ನಗರಠಾಣೆಯ ಪಿಎಸ್‍ಐ ಶ್ರೀಧರ್, ಸಿಬ್ಬಂದಿಗಳಾದ ಸೈಯದ್ ಗಫಾರ್, ದ್ವಾರಕೀಶ್, ಮಂಜುನಾಥ್ ಬಿ.ವಿ., ಪ್ರಕಾಶ್ ಟಿ., ನಿಂಗರಾಜ್, ಇಲಿಯಾಜ್, ನಾಗರಾಜ್, ಜಿ.ಎಂ.ನೀಲಮೂರ್ತಿ, ಶಿವಪದ್ಮ, ಮಹೇಶ್‍ಕುಮಾರ್ ತಂಡಕ್ಕೆ ಬಹುಮಾನ ಘೋಷಣೆ ಮಾಡಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ .

       ಸುದ್ದಿಗೋಷ್ಠಿಯಲ್ಲಿ ಪಿಎಸ್‍ಐ, ಶ್ರೀಧರ್, ಸಿಬ್ಬಂದಿಗಳಾದ ಸೈಯದ್ ಗಫಾರ್, ದ್ವಾರಕೀಶ್, ಮಂಜುನಾಥ್ ಬಿ.ವಿ., ಪ್ರಕಾಶ್ ಟಿ., ನಿಂಗರಾಜ್, ಇಲಿಯಾಜ್, ನಾಗರಾಜ್, ಜಿ.ಎಂ.ನೀಲಮೂರ್ತಿ, ಶಿವಪದ್ಮ, ಮಹೇಶ್‍ಕುಮಾರ್ ಹಾಗೂ ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap