ಬೆಂಗಳೂರು
ಅಪ್ರಾಪ್ತ ಬಾಲಕನೊಬ್ಬನ ಬೆತ್ತಲೆ ಫೋಟೋ ಇಟ್ಟುಕೊಂಡು ಮರ್ಯಾದೆ ಕಳೆಯುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ರಾಜಾಜಿನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಪ್ರಾಪ್ತ ಬಾಲಕನಿಗೆ ಬ್ಲಾಕ್ ಮೇಲ್ ಮಾಡಿ ನಗದು ಸೇರಿ 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಪಡೆದು ತಲೆಮರೆಸಿ ಕೊಂಡಿದ್ದ ಆರೋಪಿ ವಿಶ್ವನಾಥ್‍ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಅಪ್ರಾಪ್ತ ಬಾಲಕಿ ಮತ್ತು ಬಾಲಕನೊಬ್ಬನಿಗೆ ಇನ್ ಸ್ಟಾಗ್ರಾಂ ಮೂಲಕ ಆರೋಪಿಯ ಪರಿಚಯವಾಗಿತ್ತು. ಇವರಿಬ್ಬರು ಚಾಟ್ ಮಾಡುತ್ತಿದ್ದರು. ಒಂದು ದಿನ ಬಾಲಕಿ ಚಾಟ್ ಮಾಡುವ ವೇಳೆ ನಿನ್ನ ನಗ್ನ ಫೋಟೋ ಕಳಿಸು ಎಂದು ಬಾಲಕನ ಬಳಿ ಕೇಳಿದ್ದಾಳೆ.
ಬಾಲಕಿ ಮಾತಿನಂತೆ ಬಾಲಕ ತನ್ನ ನಗ್ನ ಫೋಟೋ ಕಳುಹಿಸಿದ್ದಾನೆ. ಇತ್ತ ಆರೋಪಿ ವಿಶ್ವನಾಥ್ ಬಾಲಕಿಯ ಇನ್ ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಮಾಡಿದ್ದಾನೆ. ಈ ವೇಳೆ ಆರೋಪಿ ವಿಶ್ವನಾಥ್ ಬಾಲಕನ ಬೆತ್ತಲೆ ಫೋಟೋ ಇಟ್ಟುಕೊಂಡು ಬಾಲಕನಿಗೆ ಹಣಕ್ಕೆ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ್ದಾನೆ.
ಬಾಲಕ ಮಾನಕ್ಕೆ ಅಂಜಿ ಆರೋಪಿ ವಿಶ್ವನಾಥ್‍ಗೆ ಹಂತ ಹಂತವಾಗಿ ನಗದು ಸೇರಿ 7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ನೀಡಿದ್ದಾನೆ. ಆದರೂ ಆರೋಪಿ ಮತ್ತೆ ಮತ್ತೆ ಹಣಕ್ಕಾಗಿ ಬಾಲಕನಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದನು.ಕೊನೆಗೆ ಕುಟುಂಬದವರಿಗೆ ಈ ಬಗ್ಗೆ ತಿಳಿಸಿ ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ದಾಖಲಿಸಿಕೊಂಡ ರಾಜಾಜಿನಗರ ಪೆÇಲೀಸರು ಆರೋಪಿ ವಿಶ್ವನಾಥ್‍ನನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ