ರಕ್ತದಾನ ಮಹತ್ತರವಾದ ದಾನವಾಗಿದೆ ಮತ್ತೊಂದು ಜೀವ ಉಳಿಯುತ್ತೆ:-ಜಿ.ಲಕ್ಷ್ಮಿಪತಿ

ಹಗರಿಬೊಮ್ಮನಹಳ್ಳಿ:

     ಪ್ರತಿಯೊಬ್ಬ ಆರೋಗ್ಯವಂತ ಮನುಷ್ಯನು ರಕ್ತದಾನ ಮಾಡಬೇಕು, ರಕ್ತದಾನ ಮಹತ್ತರವಾದ ದಾನವಾಗಿದೆ ಎಂದು ಆರ್ಯವೈಶ್ಯ ಟ್ರಸ್ಟ್‍ನ ಅಧ್ಯಕ್ಷ ಜಿ.ಲಕ್ಷ್ಮಿಪತಿ ಹೇಳಿದರು.

     ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ವಾಸವಿ ಜಯಂತಿ ಅಂಗವಾಗಿ ವಾಸವಿ ಯುವಜನ ಸಂಘದ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಕ್ತದಾನ ಮಾಡಲು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು. ಆದರೆ, ರಕ್ತದಾನಮಾಡಲು ಅನೇಕರು ಮೀನಾಮೇಷಮಾಡುತ್ತಾರೆ ಇದರಿಂದ ಈಗಾಗಲೆ ವಿಜ್ಞಾನದಲ್ಲಿ ಹಲವಾರು ಸಂಶೋಧನೆಗಳು ನಡೆಯುತ್ತಿವೆ ಮುಂದಿನ ದಿನಮಾನಗಳಲ್ಲಿ ‘ಕೃತಕ ರಕ್ತ’ ಕಂಡು ಹಿಡಿಯುವ ದಿನಗಳು ದೂರವಿಲ್ಲ. ಆಸ್ಟ್ರೇಲಿಯಾ ಕಂಪನಿಯೊಂದು ಸಂಶೋಧನೆಮಾಡಿರುವ ಡ್ರೋನ್ ಟೆಕ್ನಾಲಜಿಯಿಂದ ಅರಣ್ಯ ಬೆಳೆಸುವ ಕಾರ್ಯ ಈಗಾಗಲೇ ಸಾಕಾರಗೊಂಡಿದೆ. ಆದ್ದರಿಂದ ಕೃತಕ ರಕ್ತಕ್ಕಿಂತ ಮಾನವನಾದ ಮೇಲೆ ಒಬ್ಬರಿಗೊಬ್ಬರು ಸಹಕಾರವಿರಬೇಕು ಎಂದರು. ಈ ಬಾರಿ ನಮ್ಮ ವಾಸವಿ ಯುವಜನ ಸಂಘದ ಯುವಕರು ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಡಾ|| ಬಂಡ್ರಿ ವಿಶ್ವನಾಥ ಮಾತನಾಡಿ ಯುವಕರು ಇಂತಹ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಬೇಕು. ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಸುವ ಸಾರ್ಥಕತೆಯನ್ನು ನಾವು ಪಡೆದುಕೊಳ್ಳುತ್ತೇವೆ ಎಂದರು.
ಕೋರ್‍ಗಲ್ ಗಿರಿರಾಜ್ ಪ್ರಾಸ್ತವಿಕ ಮಾತನಾಡಿ, ನಾವು ವಾಸವಿ ಯುವಜನ ಸಂಘದ ವತಿಯಿಂದ ವಾಸವಿ ಜಯಂತಿ ಅಂಗವಾಗಿ ಈ ಬಾರಿ ರಕ್ತದಾನ ಶಿಬಿರವನ್ನು ಆಯೋಜಿಸಬೇಕೆಂದುಕೊಂಡು ಈ ಕಾರ್ಯಕ್ರಮವನ್ನು ಮಾಡಲು ನಮ್ಮ ಅಧ್ಯಕ್ಷರು ತುಂಬಾ ಸಹಕಾರ ನೀಡಿದರು, ನಮ್ಮ ಯುವಕರು ಸ್ವಯಂಪ್ರೇರಿತವಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿಯ ಮೆಡಿಕಲ್ ಆಫೀಸರ್ ಡಾ||ಶಿವಪ್ಪ ಸಿದ್ದಪ್ಪ ಸಂಗೊಳ್ಳಿ ಜಿ.ಭರತ್, ಬೆಲಂಕೊಂಡ ರಮೇಶ್, ರಾಘವೇಂದ್ರ, ಡಿ.ಗೋಪಾಲ, ಎಸ್.ಪ್ರಕಾಶ್, ಪೂರ್ಣಚಂದ್ರರಾವ್ ಹಾಗೂ ವಾಸವಿ ಯುವಜನ ಸಂಘದ ಸದಸ್ಯರು ಉಪಸ್ಥಿರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap