ಬೆಂಗಳೂರು
ನಗರದ ಕುಮಾರಕೃಪ ರಸ್ತೆ ಹಾಗೂ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಭಾನುವಾರ ಚಿತ್ರಪಟಗಳು ಕಲಾಕೃತಿಗಳು ಕುಂಚದಿಂದ ಸ್ಥಲದಲ್ಲಿಯೇ ಚಿತ್ರ ಬಿಡಿಸುವ ಕಲಾವಿದರು ಅವರ ಕಲಾ ನೈಪುಣ್ಯತೆಯನ್ನು ಸಾರುವ ತರಾವರಿ ಚಿತ್ರಗಳು ಚಿತ್ರರಸಿಕರ ಮನಸೂರೆಗೊಂಡವು.
ನಗರದಲ್ಲಿ ಆಯೋಜಿಸಿದ್ದ 16ನೇ ಚಿತ್ರಸಂತೆಯಲ್ಲಿ ಅನಾವರಣಗೊಂಡಿದ್ದ ಕಲಾ ವೈಭವವನ್ನು ನೋಡಲು ಚಿತ್ರ ಪ್ರೇಮಿಗಳು ಮುಗಿಬಿದ್ದರು ಕುಮಾರಕೃಪ ಸುತ್ತಮುತ್ತಲ ರಸ್ತೆಗಳು ಚಿತ್ರಕಲಾಪರಿಷತ್ತಿನ ಆವರಣ ಚಿತ್ರ ಕಲೆಗಳಿಂದ ತುಂಬಿಹೋಗಿತ್ತು.ಬೆಳಿಗ್ಗೆ 8ರಿಂದ ಆರಂಭವಾದ ಸಂತೆಯು ರಾತ್ರಿಯವರೆಗೆ ನಡೆಯಿತು.
ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಆವರಣವನ್ನು ಮಹಾತ್ಮ ಗಾಂಧಿಯವರ ಕನ್ನಡಕ, ಚರಕ ಮೊದಲಾದ ವಸ್ತುಗಳನ್ನು ಬೃಹತ್ ರೂಪದಲ್ಲಿ ನಿರ್ಮಿಸಿದ್ದು ಚಿತ್ರಸಂತೆಯ ವಿಶೇóವಾಗಿತ್ತು.
ಚಿತ್ರಸಂತೆಗೆ ಲೋಕಾಸಭಾ ಸದಸ್ಯ ಪಿ.ಸಿ.ಮೋಹನ್ ಅವರು ಗಾಂಧಿ ಚಿತ್ರವಿರುವ ಕ್ಯಾನ್ವಾಸ್‍ಗೆ ಸಹಿ ಹಾಕಿ ಚಾಲನೆ ನೀಡಿಜಡಿu ಕಾರ್ಯಕ್ರಮದಲ್ಲಿ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಇನ್ನಿತರರು ಭಾಗಿಯಾಗಿದ್ದರು.
ಪ್ರತೀ ವರ್ಷದಂತೆ ಈ ವರ್ಷವೂ ಚಿತ್ರಸಂತೆ ನಡೆಯುತ್ತಿದ್ದು, ಗಾಂಧೀಜಿಯವರ 150ನೇ ಜನ್ಮ ವರ್ಷವಾಗಿರುವುದರಿಂದ ಈ ವರ್ಷದ ಚಿತ್ರಸಂತೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಗೆ ಸಮರ್ಪಣೆ ಮಾಡಲಾಗಿದ್ದು ಚಿತ್ರಸಂತೆಯ ಸಂಪೂರ್ಣ ಅಲಂಕಾರವನ್ನು ಗಾಂಧಿಗೆ ಸಮರ್ಪಿಸಲಾಗಿದೆ.
ಮಹಾತ್ಮ ಗಾಂಧಿಯವರು ಬೆಂಗಳೂರಿಗೆ ಬಂದಾಗಲೆಲ್ಲ ಕುಮಾರಕೃಪಾದಲ್ಲಿಯೇ ವಾಸ್ತವ್ಯ ಹೂಡುತ್ತಿದ್ದು, ಆಗ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿನ ಗಾಂಧಿ ಕುಟೀರದ ಕಲ್ಲು ಬಂಡೆಯ ಮೇಲೆ ವಿರಮಿಸಿದ್ದರು ಎಂಬುದು ಇಂದು ಐತಿಹಾಸಿಕ ದಾಖಲೆಯಾಗಿದೆ. ಹೀಗಾಗಿ ಚಿತ್ರಕಲಾ ಪರಿಷತ್ತು ಮಹಾತ್ಮ ಗಾಂಧಿಯವರಿಗೆ ತನ್ನದೇ ಆದ ರೀತಿಯಲ್ಲಿ ದೃಶ್ಯ ಕಲೆಯ ಮೂಲಕ ಗೌರವವನ್ನು ಅರ್ಪಿಸುತ್ತಿದೆ.
ಛಾಯಾಚಿತ್ರ ಪ್ರದರ್ಶನ
ಚಿತ್ರಕಲಾ ಪರಿಷತ್ತಿನ ಚಿತ್ರಕಲಾ ಮಹಾವಿದ್ಯಾಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಂಪೂರ್ಣ ಆವರಣವನ್ನು ಮಹಾತ್ಮ ಗಾಂಧಿಯವರ ಕನ್ನಡಕ, ಚರಕ ಮೊದಲಾದ ವಸ್ತುಗಳನ್ನು ಬೃಹತ್ ರೂಪದಲ್ಲಿ ನಿರ್ಮಿಸಿದ್ದಾರೆ. ಗಾಂಧೀಜಿಯವರು ವಿರಮಿಸಿದ ಸ್ಥಳದಲ್ಲಿ ಕುಟೀರವನ್ನು ನಿರ್ಮಿಸಿ ಗಾಂಧಿಭವನದಿಂದ ಎರವಲು ಪಡೆದ ಗಾಂಧೀಜಿಯವರ ಕುರಿತಾದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಚಿತ್ರಕಲಾ ಪರಿಷತ್ತಿನ 4 ಗ್ಯಾಲರಿಗಳಲ್ಲೂ ಆಹ್ವಾನಿತ ಕಲಾವಿದರು ರಚಿಸಿರುವ ಗಾಂಧಿಯವರ ಕುರಿತಾದ ಕಲಾಕೃತಿಗಳನ್ನು ಕೂಡ ಪ್ರದರ್ಶಿಸಲಾಗಿದೆ.
ಉಳಿದಂತೆ ಪ್ರತಿ ವರ್ಷದಂತೆ ಈ ಬಾರಿಯೂ ದೇಶದ ವಿವಿಧ ಭಾಗಗಳಿಂದ ಬರುವ ಸುಮಾರು 1,500 ಕಲಾವಿದರ ಕಲಾಕೃತಿಗಳು ಪ್ರದರ್ಶನವಾಗುತ್ತಿವೆ. ಕೇರಳ,ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಒಡಿಶಾ ಮೊದಲಾದ ರಾಜ್ಯಗಳಿಂದ ಕಲಾವಿದರು ಭಾಗವಹಿಸಿದ್ದಾರೆ.
4 ಸಾವಿರ ಕಲಾವಿದರು ಭಾಗಿ
ಚಿತ್ರಸಂತೆಯಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದಾರೆ.ಸಾಮಾನ್ಯವಾಗಿ ಚಿತ್ರಸಂತೆಯಲ್ಲಿ ಮೈಸೂರು ಸಾಂಪ್ರದಾಯಿಕ ಶೈಲಿ, ತಂಜಾವೂರು, ರಾಜಸ್ಥಾನಿ, ಮಧುಬನಿಯ, ತೈಲ ಮತ್ತು ಜಲವರ್ಗಗಳ ಕಲಾಕೃತಿಗಳು ಲಭ್ಯವಿರುತ್ತದೆ, ಇವಲ್ಲದೆ ಅಕ್ರಿಲಿಕ್, ಕೊಲಾಜ್, ಲಿಥೋಗ್ರಾಫ್ ಮೊದಲಾದ ಪ್ರಕಾರಗಳ ಕಲಾಕೃತಿಗಳು ಇಲ್ಲಿ ದೊರೆಯುತ್ತವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
