ಶ್ರೀರಾಮ ದೇವಸ್ಥಾನದ ಹುಂಡಿ ಹಣ ಕಳವು

ಶಿರಾ:

     ನಗರದ ಜ್ಯೋತಿ ನಗರ ಬಡಾವಣೆಯ ಶ್ರೀರಾಮ ದೇವಸ್ಥಾನದ ಬಾಗಿಲನ್ನು ಮುರಿದ ಕಳ್ಳರು ದೇವಸ್ಥಾನದ ಹುಂಡಿಯ ಹಣ ಕಳವು ಮಾಡಿ ಪರಾರಿಯಾಗಿದ್ದಾರೆ.ಶನಿವಾರ ರಾತ್ರಿ ಜ್ಯೋತಿ ನಗರದಲ್ಲಿನ ಶಾರೀರಾಮ ದೇವಸ್ಥಾನದ ಬಾಗಿಲನ್ನು ಕಬ್ಬಿಣದ ರಾಡಿನಿಂದ ಮುರಿದಿರುವ ಕಳ್ಳರು ದೇವಸ್ಥಾನದ ಒಳಗೆ ನುಗ್ಗಿ ಹುಂಡಿಯ ಬೀಗ ಮುರಿದು ಹುಂಡಿಯಲ್ಲಿದ್ದ ಸುಮಾರು 12.000 ರೂಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ