ಹ್ಯೂಮಸ್ ಹೆಚ್ಚಿಸಿಕೊಂಡು ಬರಗಾಲ ಮೆಟ್ಟಿನಿಲ್ಲಲು ಕರೆ

0
10

ದಾವಣಗೆರೆ:

      ಅಡಕೆ ತೋಟಗಳಲ್ಲಿ ಹ್ಯೂಮಸ್ ಹೆಚ್ಚಿಸಿಕೊಂಡು, ರೈತರು ಬರಗಾಲವನ್ನು ಮೆಟ್ಟಿನಿಲ್ಲಬೇಕೆಂದು ಕೃಷಿ ರತ್ನ ಪುರಸ್ಕøತ, ಸಾವಯವ ಕೃಷಿ ತಜ್ಞ ಡಾ. ಕೆ.ಆರ್. ಹುಲ್ಲುನಾಚೇಗೌಡ ಕರೆ ನೀಡಿದರು.

      ರಾಜ್ಯ ಕೃಷಿ ಅಭಿಯಾನ ಟ್ರಸ್ಟ್ ಬೆಂಗಳೂರು, ಸಾವಯವ ಕೃಷಿ ಮತ್ತು ತರಬೇತಿ ಮತ್ತು ಮಾಹಿತಿ ಕೇಂದ್ರ, ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ದಾವಣಗರೆ, ಚನ್ನಗಿರಿ, ಹರಪನಹಳ್ಳಿ ಹಾಗೂ ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳಾದ ಕಕ್ಕರಗೊಳ್ಳ, ಅವರಗೊಳ್ಳ, ಮೆಳ್ಳೆಕಟ್ಟೆ, ಅಣಜಿ, ಕರೇಕಟ್ಟೆ, ಕಂಚುಗಾರನಹಳ್ಳಿ, ದಾಗಿನಕಟ್ಟೆ, ರಾಮತೀರ್ಥ ಇನ್ನೂ ಮುಂತಾದ ಗ್ರಾಮಗಳ ರೈತರ ಅಡಕೆ, ತೆಂಗು ಹಾಗು ಎಲೆಬಳ್ಳಿ ತೋಟಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರನ್ನುದ್ದೇಶಿಸಿ ಅವರು ಮಾತನಾಡಿದರು.

      ಅಡಕೆ ಒಂದು ಉಷ್ಣವಲಯದ ಬೆಳೆಯಾಗಿದ್ದು, ಅತಿಯಾಗಿ ನೀರನ್ನು ಉಣಿಸಬಾರದು, ತಮ್ಮ ತೋಟದಲ್ಲಿರುವ ಅಡಕೆ ಗರಿಗಳಿಂದ ಬುಡದಲ್ಲಿ ಮುಚ್ಚುಗೆ ಮಾಡುವುದರಿಂದ ಮಣ್ಣಿನಲ್ಲಿರುವ ತ್ಯಾಜ್ಯಗಳು ಹ್ಯೂಮಸ್ ಆಗಿ ಪರಿವರ್ತನೆಗೊಂಡು ನಮ್ಮ ಅಡಿಕೆ ಬೆಳೆಗೆ ಬೇಕಾಗುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುವುದರೊಂದಿಗೆ ಸಾವಯವ ಇಂಗಾಲವನ್ನು ಹೆಚ್ಚಿಸುತ್ತದೆ, ಕೋಟ್ಯಾನುಕೋಟಿ ಸೂಕ್ಷ್ಮಣುಜೀವಿಗಳು ಮಣ್ಣಿನಲ್ಲಿ ಪುನರುಜ್ಜಿವನಗೊಂಡು ಜೈವಿಕ ಪರಿಸರ ನಿರ್ಮಾಣವಾಗುವುದರಿಂದ ಮಣ್ಣಿಗೆ ರೋಗ ನಿರೋಧಕ ಶಕ್ತಿ ಜಾಸ್ತಿಯಾಗಿ ಮಣ್ಣಿನಲ್ಲಿ ಎರೆಹುಳುಗಳು ನೈಸರ್ಗಿಕವಾಗಿ ಉತ್ಪತ್ತಿಯಾಗುತ್ತವೆ ಮತ್ತು ಮಣ್ಣು ಫಲವತ್ತತೆಯೊಂದಿಗೆ ನೀರನ್ನು ಹಿಡಿದಿಟ್ಟುಕೊಳ್ಳಲು ಸಹಾಯಕವಾಗುತ್ತವೆ ಎಂದರು.

        01 ಕೆ.ಜಿ. ಹ್ಯೂಮಸ್ ಮಣ್ಣಿನಲ್ಲಿದ್ದರೆ 01 ದಿನಕ್ಕೆ ಕನಿಷ್ಟ 06 ಲೀಟರ್ ನೀರನ್ನು ಭೂಮಿಯ ಆಳದಿಂದಾಗಲಿ ಅಥವಾ ವಾತಾವರಣದಲ್ಲಿರುವ ತೇವಾಂಶದಿಂದಾದರು ಶೇಖರಿಸಿಟ್ಟುಕೊಳ್ಳುತ್ತದೆ. ಅಡಕೆ ತೋಟದಲ್ಲಿ ಕನಿಷ್ಟ 200 ರಿಂದ 250 ಗ್ಲಿರಿಸಿಡಿಯಾ (ಗೊಬ್ಬರದ ಗಿಡ) ಸಸ್ಯಗಳನ್ನು ಬೆಳೆಸುವುದರಿಂದ ಸಾರಜನಕವನ್ನು ಸ್ಥಿರೀಕರಣ ಮಾಡಿಕೊಳ್ಳುವ ಸಾಮಥ್ರ್ಯ ಅಡಿಕೆ ಗಿಡಗಳಿಗೆ ಬರುತ್ತದೆ ಹಾಗು ಕಡಿಮೆ ನೀರನ್ನು ಬಳಸಿ ಯಾವುದೇ ರೋಗಗಳು ಬಾರದಂತೆ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.ತಜ್ಞರೊಂದಿಗೆ ರಾಜ್ಯ ಕೃಷಿ ಅಭಿಯಾನ ಟ್ರಸ್ಟ್ ನಿರ್ದೇಶಕ ದಿದ್ದಿಗೆ ಮಹಾದೇವಪ್ಪ, ಮ್ಯಾನೇಜಿಂಗ್ ಟ್ರಸ್ಟಿ ವಿಶ್ವನಾಥ ಕಕ್ಕರಗೊಳ್ಳ, ಬೆಂಗಳೂರಿನ ಚರಣ್‍ನಾಯ್ಡು, ಮಣಿಕಂಠ, ಅಂಜನ್‍ಕುಮಾರ್ ಮತ್ತಿತರರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here