ಮಹಾ ಮಳೆಗೆ ದುಬಾರೆ ಆನೆ ಕ್ಯಾಂಪ್ ಜಾಲಾವೃತ..!

ಮಡಿಕೇರಿ

      ಕೊಡಗಿನಲ್ಲಿ ದಾಖಲೆಯ ಮಳೆ ಸುರಿದಿದೆ. ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ದುಬಾರೆ ಕ್ಯಾಂಪ್ ಸಂಪರ್ಕ ಕಡಿತಗೊಂಡಿದ್ದು, ಆನೆಗಳಿಗೆ ಆಹಾರ ಸಾಗಿಸಲು ಆಗುತ್ತಿಲ್ಲ. ಪ್ರತಿನಿತ್ಯ ಆನೆಗಳಿಗೆ ಐದು ಲಾರಿಗಳು ಆಹಾರ ತೆಗೆದುಕೊಂಡು ಹೋಗಲಾಗುತ್ತಿತ್ತು. ಆದರೆ ಈಗ ದುಬಾರೆ ಸಂಪೂರ್ಣ ಜಲಾವೃತವಾಗಿರುವ ಕಾರಣ ಲಾರಿ ಹೋಗಲು ಸಾಧ್ಯವಾಗುತ್ತಿಲ್ಲ.

      ಇತ್ತ ಮಡಿಕೇರಿ ತಾಲ್ಲೂಕಿನ ಬಲಮುರಿಯಲ್ಲಿ ಮನೆ ಸಂಪೂರ್ಣ ಜಲಾವೃತವಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ಹತ್ತು ಜನರ ರಕ್ಷಣೆ ಮಾಡಲಾಗಿದೆ. ಇಬ್ಬರು ವೃದ್ಧರು, ಮೂವರು ಮಹಿಳೆಯರು, ಮೂವರು ಬಾಲಕಿಯರು ಸೇರಿದಂತೆ ಹತ್ತು ಜನರನ್ನು ರಕ್ಷಿಸಲಾಗಿದೆ. ಜಿಲ್ಲಾಡಳಿತ ಎನ್‍ಡಿಆರ್‍ಎಫ್ ತಂಡ ಮತ್ತು ಸ್ಥಳೀಯ ಪೊಲೀಸರ ಜೊತೆ ಬೋಟ್ ಮೂಲಕ ತೆರಳಿ ಜನರ ರಕ್ಷಣೆ ಮಾಡಿದೆ.

      ಮಡಿಕೇರಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಗೋಣಿಕೊಪ್ಪ ಪಟ್ಟಣ ಅರ್ಧ ಮುಳುಗಡೆ ಆಗಿದೆ. ಪಾಲಿಬೆಟ್ಟ – ಗೋಣಿಕೊಪ್ಪ ಹಾಗೂ ಪೊನ್ನಂಪೇಟೆ ಗೋಣಿಕೊಪ್ಪ ರಸ್ತೆಯನ್ನೂ ಬಂದ್ ಮಾಡಲಾಗಿದೆ. ಸೆಕೆಂಡ್ ಬ್ಲಾಕ್ ಬಡಾವಣೆಯಲ್ಲಿ ಮನೆಗಳ ಮುಳುಗಡೆಯಾಗಿದ್ದು, ಕೊಡಗು ಜಿಲ್ಲಾಡಳಿತ ಗೋಣಿಕೊಪ್ಪ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆದಿದಾರೆ. ಕ್ಷಣಕ್ಷಣಕ್ಕೂ ಮಳೆಯ ಆರ್ಭಟ ಹೆಚ್ಚಾಗುತ್ತಿದ್ದು, ರಸ್ತೆದಾಟಲು ಸಾರ್ವಜನಿಕರು ಪರದಾಡುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link